ಕಾಸರಗೋಡು: ಮೆಡಿಸಿನ್, ಇಂಜಿನಿಯರಿಂಗ್ ಮೊದಲಾದ ಪೆÇ್ರಫೆಷನಲ್ ಕೋರ್ಸ್‍ಗಳಿಗೆ ಸೇರಿದಂತೆ ಇತರೆ ಕೋರ್ಸ್‍ಗಳಲ್ಲಿ ಕಲಿಯುವ ಮುಸ್ಲಿಂ ವಿದ್ಯಾರ್ಥಿಗಳಿಂದ ರಾಜ್ಯ ವಕ್ಫ್ ಮಂಡಳಿಯು ನೀಡುವ ಬಡ್ಡಿ ರಹಿತ ಸಾಲಕ್ಕಾಗಿ ಅರ್ಜಿ ಆಹ್ವಾನಿಸಿದೆ. ಪ್ರಸಕ್ತ ಅಧ್ಯಯನ ವರ್ಷಕ್ಕೆ ಅಲಾಟ್‍ಮೆಂಟ್ ಪ್ರಕಾರ ಒಂದನೇ ವರ್ಷಕ್ಕೆ ಸೇರಿದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಇರುತ್ತದೆ. ಎಂ.ಬಿ.ಬಿ.ಎಸ್, ಬಿ.ಟೆಕ್, ಬಿ.ಟೆಕ್ ಲಾಟರಲ್, ಬಿ.ಡಿ.ಎಸ್, ಬಿ.ವಿ.ಎಸ್.ಸಿ, ಬಿ.ಹೆಚ್.ಎಂ.ಎಸ್, ಬಿ.ಎ.ಎಮ್.ಎಸ್, ಬಿ.ಫಾಂ, ಡಿ.ಫಾಂ, ಫಾಂ ಡಿ, ಬಿ.ಎಸ್.ಸಿ ನಸಿರ್ಂಗ್, ಜನರಲ್ ನಸಿರ್ಂಗ್, ಬಿ.ಎಸ್.ಸಿ ಮೈಕ್ರೋ ಬಯಾಲಜಿ, ಬಿ.ಎಸ್.ಸಿ ಅಗ್ರಿಕಲ್ಚರ್, ಬಿ.ಎಸ್.ಸಿ ಎಂ.ಎಲ್.ಟಿ, ಬಿ.ಯು.ಎಮ್.ಎಸ್ (ಯುನಾನಿ ಮೆಡಿಸಿನ್), ಬಿ.ಸಿ.ಎ, ಫ್ಯಾಶನ್ ಟೆಕ್ನಾಲಜಿ (ನಿಫ್ಟ್), ಡಿಗ್ರಿ ಇನ್ ಟ್ರಾವಲ್ ಆಂಡ್ ಟೂರಿಸಂ, ಎಲ್.ಎಲ್.ಬಿ, ಬಿ.ಎಸ್.ಸಿ (ಸೈಬರ್ ಫೆÇೀರೆನ್ಸಿಕ್), ಬಿ.ಪಿ.ಟಿ, ಬಿ.ಎಸ್.ಸಿ (ರೇಡಿಯಾಲಜಿ), ಬಿ.ಕಾಂ ವಿತ್ ಏವಿಯೇಷನ್, ಬಿ.ಎಸ್.ಸಿ ರೆಸ್ಪಿರೇಟರಿ ಥೆರಪಿ, ಬಿ.ಎಸ್.ಸಿ ಓಪ್‍ಟೋಮೇಟ್ರಿ, ಡಿಪೆÇ್ಲೀಮಾ ಇನ್ ಕಾರ್ಡಿಯೋ ವಾಸ್‍ಕುಲಾರ್ ಟೆಕ್ನಾಲಜಿ, ಬಿ.ಎಸ್.ಸಿ ಪಫ್ರ್ಯೂಷನ್ ಟೆಕ್ನಾಲಜಿ, ನೆವಲ್ ಆರ್ಕ್ ಆಂಡ್ ಶಿಪ್ ಬಿಲ್ಡಿಂಗ್, ಹಾಸ್ಪಿಟಾಲಿಟಿ ಮೇನೇಜ್ಮೆಂಟ್, ಬಿ.ಟಿ.ಎ ಸಂಸ್ಕøತ ಮುಂತಾದ ಕೋರ್ಸುಗಳಿಗೂ ಎಂ.ಫಾಂ, ಜನರಲ್ ನಸಿರ್ಂಗ್, ಎಂ.ಎಸ್.ಸಿ ನಸಿರ್ಂಗ್, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲ್ಯು, ಎಂ.ಎಸ್.ಸಿ ಮಾಥ್ಸ್, ಹಾಸ್ಪಿಟಲ್ ಮೇನೇಜ್‍ಮೆಂಟ್, ಯುನಾನಿ, ಹೋಮಿಯೋ, ಪಶುವೈದ್ಯಕೀಯ ಮುಂತಾದ ಗ್ರಾಜುವೇಷನ್ ಕೋರ್ಸ್ ಗಳಿಗೆ ಸೇರಿದಂತೆ ಒಟ್ಟು 100 ಜನರಿಗೆ ಈ ವರ್ಷ ಸಾಲ ನೀಡಲಾಗುವುದು. ಪೂರ್ವ ಪರೀಕ್ಷೆಯಲ್ಲಿ ಶೇಕಡಾ 60ರಷ್ಟು ಮಾರ್ಕ್ ಅಥವಾ ತತ್ಸಮಾನ ಗ್ರೇಡ್ ಪಡೆದಿರಬೇಕು. ಅರ್ಜಿದಾರರ ಕುಟುಂಬ ವಾರ್ಷಿಕ ಆದಾಯ 2,50,000 ರೂಪಾಯಿಕ್ಕಿಂತ ಕಡಿಮೆ ಇರಬೇಕು. ಅರ್ಜಿ ನಮೂನೆ ಡೌನ್‍ಲೋಡ್ ಮಾಡಬೇಕಾದ ವೆಬ್‍ಸೈಟ್ www.keralastatewakfboard.in ಅರ್ಜಿಯನ್ನು ಅಕ್ಟೋಬರ್ 31ರೊಳಗೆ ಸಲ್ಲಿಸಬೇಕು. ವಿಳಾಸ ಅಡ್ಮಿನಿಸ್ಟ್ರೇಟಿವ್ ಕಮ್ ಅಕೌಂಟೆನ್ಸಿ ಆಫೀಸರ್, ಕೇರಳ ರಾಜ್ಯ ವಖ್ಫ್ ಬೋರ್ಡ್, ಸ್ಟೇಡಿಯಂ ಹತ್ತಿರ, ವಿ.ಐ.ಪಿ.ರೋಡ್, ಕಲೂರ್ 682017.