ಕಾಸರಗೋಡು: ಬರಹಗಾರ್ತಿ ಮತ್ತು ಕವಿಯಿತ್ರಿ ಶಿಕ್ಷಕಿ ಎಂ.ಎ ಮುಮ್ತಾಜ್ ಅವರ ಪ್ರವಾಸ ಕಥನ ಪುಸ್ತಕ "ಟುಲಿಪ್ ಫ್ಲವರ್ಸ್ ಅಕ್ರಾಸ್ ದಿ ವ್ಯಾಲಿ ಆಫ್ ಕಾಶ್ಮೀರ್" ಅನಾವರಣ ಸಮಾರಂಭ ನವೆಂಬರ್ 9ರಂದು ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ ಬಿಡುಗಡೆಯಾಗಲಿದೆ ಎಂದು ಇತಿಹಾಸ ತಜ್ಞ ಸಿ. ಬಾಲನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋಯಿಕ್ಕೋಡಿನ ಹರಿತಂ ಬುಕ್ಸ್ ಪ್ರಕಾಶನಹೈದಿರುವ ಈ ಪುಸ್ತಕ ಕಾಶ್ಮೀರದ ಸೊಬಗು, ಅಲ್ಲಿನ ಗ್ರಾಮೀಣ ಜೀವನ, ಕಾಶ್ಮೀರಿ ಪಂಡಿತರ ಬಗ್ಗೆ ಮಾಹಿತಿ ಹಾಗೂ ಪ್ರವಾಸಿಗರಿಗೆ ಪ್ರವೇಶಿಸಲಾಗದ ಕಾಶ್ಮೀರದ ಕಣಿವೆಗಳಲ್ಲಿನ ಜನರ ಜೀವನದ ವಿಷಯ ಅಡಕವಾಗಿದೆ. ಜತೆಗೆ ಕಾಶ್ಮೀರದ ಜನತೆಯ ಆಚರಣೆಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಪುಸ್ತಕದ ಮೋಡಿ ಕಾಶ್ಮೀರದ ಕನಸಿನ ಸೌಂದರ್ಯದ ವಿವರಣೆಯಾಗಿದೆ. ಪ್ರವಾಸಿಗರು ಅರಿತುಕೊಳ್ಳಲೇಬೇಕಾದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ.
ಖ್ಯಾತ ಬರಹಗಾರ ಶಿಹಾಬುದ್ದೀನ್ ಪೆÇಯ್ತುಂಕಾಡವ್ ಮುನ್ನುಡಿ ಬರೆದಿದ್ದಾರೆ. ಕಾಸರಗೋಡು ನಾಯಮರ್ಮೂಲೆ ತನ್‍ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತಿಹಾಸ ಶಿಕ್ಷಕಿಯಾಗಿರುವ ಎ.ಎಂ ಮುಮ್ತಾಸ್ ಇದುವರೆಗೆ ಮೂರು ಪುಸ್ತಕಗಳನ್ನು ಹೊರತಂದಿದ್ದು, ಪ್ರಜಾಸತ್ತಾತ್ಮಕ ಕಲಾ ಸಾಹಿತ್ಯ ವೇದಿಕೆಯ ಶಿಕ್ಷಕ ಪ್ರತಿಭಾ ಪುರಸ್ಕಾರ ಹಾಗೂ ಭಾರತ ಸೇವಕ ಸಮಾಜದ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯೂ ಇವರಿಗೆ ಲಭಿಸಿರುವುದಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇರಳ ರಾಜ್ಯ ಸಾಫ್ಟ್‍ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಸಿಎಲ್ ಹಮೀದ್, ಕವಯಿತ್ರಿ ಸುಲೈಖಾ ಮಾಹಿನ್ ಉಪಸ್ಥಿತರಿದ್ದರು.