ಗ್ವಾಲಿಯರ್ (PTI): ಸನಾತನ ಧರ್ಮ ನಾಶಪಡಿಸಲು ಮತ್ತು ದೇಶ ಒಡೆಯಲು ಬಯಸುವ ಶಕ್ತಿಗಳ ವಿರುದ್ಧ ಬಿಜೆಪಿ ಹೋರಾಡಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಗ್ವಾಲಿಯರ್ (PTI): ಸನಾತನ ಧರ್ಮ ನಾಶಪಡಿಸಲು ಮತ್ತು ದೇಶ ಒಡೆಯಲು ಬಯಸುವ ಶಕ್ತಿಗಳ ವಿರುದ್ಧ ಬಿಜೆಪಿ ಹೋರಾಡಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, 'ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಮಾತ್ರವಲ್ಲ, ದೇಶ ಒಡೆಯಲು ಮತ್ತು ಸನಾತನ ಧರ್ಮ ನಾಶಪಡಿಸಲು ಬಯಸುವ ಶಕ್ತಿಗಳ ವಿರುದ್ಧವೂ ಇದೆ' ಎಂದರು.
ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈಗ ಸುಳ್ಳು ಭರವಸೆ, ಆಶ್ವಾಸನೆ ನೀಡುತ್ತಿದೆ ಎಂದರು. ತಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದು ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ತೋಮರ್, ವಿಧಾನಸಭಾ ಚುನಾವಣೆಗೆ ಬಿಜೆಪಿ ವರ್ಷವಿಡೀ ಸಿದ್ಧತೆಗಳನ್ನು ಮಾಡಿದೆ ಮತ್ತು ಬೂತ್ ಮಟ್ಟದವರೆಗೆ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.