ತಿರುವನಂತಪುರಂ: ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ ರಾಧಾಕೃಷ್ಣನ್ ಅವರು ಸಂಗೀತ ಗಾಯನಕ್ಕೆ ಪ್ರಸಿದ್ಧರಾಗಿದ್ದಾರೆ. ಇದೀಗ ಕೂಡಲಮಾಣಿಕ್ಯಂ ದೇವಸ್ಥಾನದಲ್ಲಿ ವಿಜ್ಞಾನಿ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ವೀಡಿಯೋದಲ್ಲಿ ಡಾ. ರಾಧಾಕೃಷ್ಣನ್ ಸಂಗೀತಗಾರರ ಗುಂಪಿನೊಂದಿಗೆ ಹಾಡನ್ನು ಹಾಡಿದ್ದಾರೆ.
ಅವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಕರ್ನಾಟಕ ಸಂಗೀತವನ್ನು ಹಾಡಿದರು. ಸಮಾರಂಭವು ತುಸೂರಿನ ಇರಿಂಞಲಕುಡ ಕುಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ನಡೆಯಿತು. ಅವರು ಕರ್ನಾಟಕ ಸಂಗೀತದಲ್ಲಿ ಪರಿಣತಿ ಹೊಂದಿದ್ದು, ಜೊತೆಗೆ ಕಥಕ್ಕಳಿ ಕಲಾವಿದರೂ ಹೌದು.
ನವೆಂಬರ್ 2009 ರಿಂದ ಡಿಸೆಂಬರ್ 2014 ರವರೆಗೆ ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿಎಸ್ ಎಸ್ ಸಿಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.