ಸಮರಸ ಚಿತ್ರಸುದ್ದಿ: ಕಾಸರಗೋಡು: 2023-24ನೇ ಸಾಲಿನಲ್ಲಿ ನಿವೃತ್ತರಾಗಲಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ವಿಶ್ವನಾಥ ಭಟ್, ಸೂರ್ಯನಾರಾಯಣ ಭಟ್ ಎಡನೀರು, ಬಾಬು ಥೋಮಸ್ ಹಾಗೂ ವೆಂಕಟ್ರಮಣ ಭಟ್ ಅವರನ್ನು ಆಲಂಪಾಡಿ ಶಾಲೆಯಲ್ಲಿ ಜರುಗಿದ ಕಾಸರಗೋಡು ಉಪಜಿಲ್ಲಾ ಶಾಲಾ ಕ್ರೀಡಾ ಕೂಟದ ಸಂದರ್ಭ ಅಭಿನಂದಿಸಲಾಯಿತು. ಉಪಜಿಲ್ಲಾ ಶಿಕ್ಷಣಾಧಿಕಾರಿ ಬರ್ನಾರ್ಡ್ ಆಗಸ್ಟಿನ್ ಉಪಸ್ಥಿತರಿದ್ದರು.