ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆಯ 'ನೇರ ಹಾದಿ' ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಪರೀಕ್ಷಾಂಗ ಕಛೇರಿ, ಕಾಸರಗೋಡು ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಕಾಸರಗೋಡು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‍ಎಸ್‍ಎ) ಜಂಟಿಯಾಗಿ ಹೊಸದುರ್ಗ ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ ಕಾನೂನು ಅರಿವು, ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.
ಹೊಸದುರ್ಗ ಸಹಾಯಕ ಸತ್ರ ನ್ಯಾಯಾಧೀಶ ಎಂ.ಸಿ.ಬಿಜು ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ಮುಖ್ಯ ಅತಿಥಿಯಾಗಿದ್ದರು. ಅಪರಾಧಗಳಲ್ಲಿ ಭಾಗಿಯಾಗಿರುವ ಮತ್ತು ಜೈಲಿನಲ್ಲಿರುವವರಿಗೆ ಉತ್ತಮ ನಡತೆ ಕಾಯ್ದೆ ಮತ್ತು ಇತರ ಪ್ರಮುಖ ಕಾನೂನು ವ್ಯವಸ್ಥೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಜೀವನ ಕೌಶಲ್ಯಗಳ ಆಧಾರದ ಮೇಲೆ ಜಾಗೃತಿ ಮೂಡಿಸುವ ಬಗ್ಗೆ ಬೇತಿಯನ್ನು ನೀಡಲಾಗುತ್ತದೆ. ಮರು ಅಪರಾಧ ಮಾಡುವ ಅವರ ಪ್ರವೃತ್ತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತರಗತಿ ಆಯೋಜಿಸಲಾಗುತ್ತಿದೆ. ಮೂರು ದಿವಸಗಳ ಸುದೀರ್ಘ ತರಬೇತಿ ಕಾರ್ಯಕ್ರಮದಲ್ಲಿ ಕೈದಿಗಳ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಕೀಲ ಕೆ.ಎ.ಸಾಜನ್ ಪ್ರಸ್ತುತಿ ಪಡಿಸಿದರು.
ಪೇಪರ್ ಕ್ಯಾರಿಬ್ಯಾಗ್ ಮತ್ತು ಲಾಂಗ್ ಕವರ್ ತಯಾರಿ ಬಗ್ಗೆ ವೆಳ್ಳಿಕ್ಕೋತ್ ಆರ್‍ಎಸ್‍ಇಟಿಐ ನಿರ್ದೇಶಕ ವಿ.ಪಿ.ಗೋಪಿ, ಪಿ.ರಾಮ, ಎನ್.ನಿರ್ಮಲ್ ಕುಮಾರ್, ಶೈಜಿತ್ ಕರುವಾಕೋಡ್, ಸುಭಾಷ್ ವನಶ್ರೀ, ಇರ್ಫಾದ್ ಮಾಯಿಪ್ಪಾಡಿ, ಜಿಲ್ಲಾ ಪರೀಕ್ಷಾಧಿಕಾರಿ ಪಿ.ಬಿಜು, ಅಧೀಕ್ಷಕ ಕೆ.ವೇಣು ತರಬೇತಿಯ ನೇತೃತ್ವವಹಿಸಿದ್ದರು.