ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿ ಸಂಗೀತಘಟಕ ಸ್ವರಚಿನ್ನಾರಿ ಏರ್ಪಡಿಸುವ ಖ್ಯಾತ ಸಂಗೀತ ನಿರ್ದೇಶಕ, ಅಂತಾರಾಷ್ಟ್ರೀಯ ಖ್ಯತಿಯ ಮೆಂಡೋಲಿನ್ ವಾದಕ ಎನ್.ಎಸ್ ಪ್ರಸಾದ್ ನೇತೃತ್ವದಲ್ಲಿ ಸ್ವರ ಸಂಗೀತ ಶಿಬಿರ 'ಸ್ವರ ಸಂಚಾರ'ಕಾರ್ಯಕ್ರಮ ಅ.28ರಂದು ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿರುವುದು.
ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಅ. 18ರ ಮುಂಚಿತವಾಗಿ ಸ್ವರಚಿನ್ನಾರಿ ಕಾರ್ಯದರ್ಶಿ ಕಿಶೋರ್ ಪೆರ್ಲ(8075284452) ಅಥವಾ ಜತೆಕಾರ್ಯದರ್ಶಿ ಪ್ರತಿಜ್ಞಾ ರಂಜಿತ್(9741919699)ಅವರಲ್ಲಿ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.