ಕಾಸರಗೋಡು: ರಾಜ್ಯ ಸರ್ಕಾರದ ನಿರ್ದೇಶನದಂತೆ ಕೇರಳ ಡ್ರಗ್ಸ್ ಕಂಟ್ರೋಲ್ ಇಲಾಖೆ ನಡೆಸುತ್ತಿರು ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಔಷಧ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕಾಸರಗೋಡು ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್ ನೇತೃತ್ವದಲ್ಲಿ ಜಾಗೃತಿ ತರಗತಿ ಅ. 28ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಕ್ಯಾಪಿಟೋಲ್ ಇನ್ ಹೊಟೇಲ್‍ನಲ್ಲಿ ಜಾಗೃತಿ ತರಗತಿ ನಡೆಯಲಿದೆ.
ಹಾಸ್ಪಿಟಲ್ ಫಾರ್ಮಸಿ, ನೀತಿ, ಕಾರುಣ್ಯ ಮತ್ತು ಜನ್ ಔಷಧಿ ಮೆಡಿಕಲ್ ಸ್ಟೋರ್‍ಗಳು ಸೇರಿದಂತೆ ಪ್ರದೇಶದ ಎಲ್ಲಾ ಔಷಧಿಯ ಚಿಲ್ಲರೆ ಮತ್ತು ಸಗಟು ಸಂಸ್ಥೆಗಳ ಪ್ರತಿನಿಧಿಗಳು ತರಗತಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಕಣ್ಣೂರು ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.