HEALTH TIPS

ಅಯೋಧ್ಯೆ: ರಾಮಲಲ್ಲಾ ಪ್ರತಿಷ್ಠಾಪನೆ ನಂತರ, ಮಸೀದಿಗೂ ಪ್ರಧಾನಿಯಿಂದ ಶಂಕುಸ್ಥಾಪನೆಗೆ ಮುಸ್ಲಿಂ ಸಮುದಾಯದ ಬೇಡಿಕೆ

             ಲಖನೌ: ಅಯೋಧ್ಯೆಯ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಿದಾಗ, ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಗೂ ಶಂಕುಸ್ಥಾಪನೆಯನ್ನು ಅವರೇ ನೆರವೇರಿಸಬೇಕೆಂಬ ಬೇಡಿಕೆ ಬಂದಿದೆ. 

                  ಮುಸ್ಲಿಂ ಸಮುದಾಯ ಈ ಬೇಡಿಕೆ ಮುಂದಿಟ್ಟಿದೆ. ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಿಸಲು ಉದ್ದೇಶಿಸಲಾಗಿದೆ.
 
                 ಈ ಬೇಡಿಕೆ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ, ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ (ಐಐಎಫ್ ಸಿ) ಮಸೀದಿಯ ನಕ್ಷೆ ಅನುಮೋದನೆಗೊಳ್ಳುವುದಕ್ಕೂ ಮುನ್ನ ಹಾಗೂ ಸಮರ್ಪಕ ನಿಧಿ ಸಂಗ್ರಹಕ್ಕೂ ಮುನ್ನವೇ ಪ್ರಧಾನಿ ಮೋದಿ ಅವರನ್ನು ಶಂಕುಸ್ಥಾಪನೆಗೆ ಆಹ್ವಾನಿಸುವ ಮೂಲಕ ಮಸೀದಿ ಯೋಜನೆಯನ್ನು ರಾಜಕೀಯಗೊಳಿಸುವುದು ಸೂಕ್ತವಲ್ಲ ಎಂದು ಹೇಳಿದೆ.

                    ನವೆಂಬರ್ 9, 2019 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಯೋಧ್ಯೆಯ ಸ್ಥಳೀಯ ಆಡಳಿತ ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಧನ್ನಿಪುರ ಗ್ರಾಮದಲ್ಲಿ 5 ಎಕರೆಯಷ್ಟು ಭೂಮಿಯನ್ನು ಮಂಜೂರು ಮಾಡಿತ್ತು. 

                     ಮೋದಿ ಭಾರತದ ಪ್ರಧಾನಿ, ಅವರು ಹಿಂದೂ, ಮುಸ್ಲಿಮರಿಗೂ ಸಮವಾಗಿರಬೇಕು. ಅವರು ಹಿಂದೂ ಸಹೋದರರ ಮಂದಿರವನ್ನು ಉದ್ಘಾಟಿಸಲು ಆಗಮಿಸುವುದಾದರೆ, ಮಸೀದಿಗೂ ಅವರು ಶಂಕುಸ್ಥಾಪನೆ ನೆರವೇರಿಸಲಿ ಎಂದು ಜಮೈತ್ ಉಲಮಾ-ಎ-ಹಿಂದ್ ಅಯೋಧ್ಯೆ ವಿಭಾಗದ ಅಧ್ಯಕ್ಷ ಹಿಸ್ಬುಲ್ಲಾ ಬಾದ್ ಶಾ ಖಾನ್ ಒತ್ತಾಯಿಸಿದ್ದಾರೆ.

                ಬಾಬ್ರಿ ಮಸೀದಿಯ ಮರು ನಿರ್ಮಾಣಕ್ಕೆ ಧ್ವನಿ ಎತ್ತಿದ್ದ ಭಾರತೀಯ ಮುಸ್ಲಿಂ ಲೀಗ್ ನ ರಾಜ್ಯಾಧ್ಯಕ್ಷ ನಜ್ಮುಲ್ ಹಸನ್ ಘನಿ, ಪ್ರಧಾನಿ ಮೋದಿ ಸುಪ್ರೀಂ ಕೋರ್ಟ್ ನ ಆದೇಶವನ್ನು ಗೌರವಿಸಿ ಮಸೀದಿಯ ಶಂಕುಸ್ಥಾಪನೆಯನ್ನೂ ನೆರವೇರಿಸಬೇಕು ಎಂದು ಹೇಳಿದ್ದಾರೆ. 

                   ಅಯೋಧ್ಯೆಯಲ್ಲಿ ಕೋಮು ಸೌಹಾರ್ದತೆಯ ಚಳುವಳಿಯ ಪಾಯಮ್-ಎ-ಇನ್ಸಾನಿಯತ್ ನ ಸಂಚಾಲಕ ಮೌಲಾನಾ ಅಸ್ಮಿ ನದ್ವಿ ಸಹ ಪ್ರಧಾನಿಗೆ ಮನವಿ ಮಾಡಿದ್ದು, ಪ್ರಸ್ತಾವಿತ ಮಸೀದಿ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ಖಂಡಿತವಾಗಿಯೂ ಸಕಾರಾತ್ಮಕ ಸಂದೇಶ ರವಾನೆ ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

                ಈ ಬೇಡಿಕೆಗಳ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಐಐಸಿಎಫ್ ಕಾರ್ಯದರ್ಶಿ ಅಖ್ತರ್ ಹುಸೇನ್, ಮಸೀದಿ ಪ್ರದೇಶಕ್ಕೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುತ್ತೇವೆ. ಆದರೆ ಇದಕ್ಕೆ ರಾಜಕೀಯ ಬಣ್ಣ ನೀಡುವುದರಿಂದ ಜನರು ದೂರ ಉಳಿಯಬೇಕು, ಈ ಪ್ರಸ್ತಾವಿತ ಮಸೀದಿ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries