ಚೆನ್ನೈ: ತಮಿಳುನಾಡಿನ ಮಧುರೈ, ರಾಮನಾಥಪುರಂ ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ಇದೇ 22 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರ‍್ಯಾಲಿ ನಡೆಸಲು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಅನುಮತಿ ನಿರಾಕರಿಸಿದೆ.
ಆದಾಗ್ಯೂ, ಅಕ್ಟೋಬರ್ 22 ರಂದು 11 ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸಲು ಆರ್‌ಎಸ್‌ಎಸ್‌ಗೆ ಅನುಮತಿ ನೀಡಿದೆ. ಮಧುರೈ ಸೇರಿದಂತೆ ದಕ್ಷಿಣದ 14 ಜಿಲ್ಲೆಗಳ 20 ಸ್ಥಳಗಳಲ್ಲಿ 22 ರಿಂದ 29ರವರೆಗೂ ಆರ್‌ಎಸ್‌ಎಸ್ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಮಧುರೈ, ತಂಜಾವೂರು, ತಿರುಚ್ಚಿ, ದಿಂಡಿಗಲ್, ತೇಣಿ, ಪುದುಕೊಟ್ಟೈ, ಕರೂರ್, ತಿರುನಲ್ವೇಲಿ, ತೂತುಕುಡಿ, ತೆಂಕಶಿ, ವಿರುಧುನಗರ, ಶಿವಗಂಗೈ, ರಾಮನಾಥಪುರಂ, ಕನ್ಯಾಕುಮಾರಿ ಸೇರಿದಂತೆ 14 ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಮನವಿಯಲ್ಲಿ ಕೋರಲಾಗಿತ್ತು. ಆದಾಗ್ಯೂ, 11 ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದ್ದು, ಮೂರು ಜಿಲ್ಲೆಗಳಲ್ಲಿ ಅನುಮತಿ ನಿರಾಕರಿಸಲಾಗಿದೆ.