ಕಾಸರಗೋಡು: ಜನ ಮೈತ್ರಿ ಪೆÇಲೀಸ್ ಕಾಸರಗೋಡು, ಚೌಕಿ ನುಸ್ರತ್ ಕ್ಲಬ್, ಟ್ರೌಮಾ ಕೇರ್ ಕಮಿಟಿ, ಕೆ.ಎಸ್.ಅಬ್ದುಲ್ಲಾ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಚೌಕಿ ನುಸ್ರತ್ ಕ್ಲಬ್ ವಠಾರದಲ್ಲಿ ಜರುಗಿತು.
ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ, ವಕೀಲೆ ನಸೀರಾ ಫೈಸಲ್ ಉದ್ಘಾಟಿಸಿದರು. ನಗರ ಠಾಣೆ ಎಸ್.ಐ ವಿನೋದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಆರ್‍ಬಿ ಡಿವೈಎಸ್ಪಿ. ಸಾಬು ಪಿ.ಕೆ ಮುಖ್ಯ ಅತಿಥಿಯಾಗಿದ್ದರು. ಕೆ.ಎಸ್.ಅಬ್ದುಲ್ಲಾ ಆಸ್ಪತ್ರೆಯ ಡಾ.ಅಲಿ ಸಮೀಲ್. ನುಸ್ರತ್ ಕ್ಲಬ್‍ಅಧ್ಯಕ್ಷ ಶುಕೂರ್ ಮುಕ್ರಿ, ಟ್ರಾಮಾ ಕೇರ್ ಸಮಿತಿ ಅಧ್ಯಕ್ಷ ಶಾಫಿ ಕಲ್ಲುವಳಪ್ಪು, ಉಪಾಧ್ಯಕ್ಷ ಜುಬೈರ್ ಪಡ್ಪು, ಸ್ಕ್ಯಾನಿಯಾ ಬೆದಿರ, ವಿವಿಧ ಜನಪ್ರತಿನಿಧೀಗಳು, ಬ್ಲಾಕ್ ಪಂಚಾಯತ್ ಸದಸ್ಯ ಸೀನತ್ ನಸೀರ್, ಗ್ರಾಮ ಪಂಚಾಯಿತಿ ಸದಸ್ಯ ರಫಿ ಏರಿಯಾಲ್. ಉದಯನ್ ಪೆರಿಯಡ್ಕ, ಮಹಮೂದ್ ಕುಲಂಗರ, ಹನೀಫ್ ಕಡಪ್ಪುರ, ಸುಲೇಖಾ ಮಾಹಿನ್, .ಪೆÇಲೀಸ್ ಅಧಿಕಾರಿಗಳು. ರಾಜಕೀಯ ಸಾಮಾಜಿಕ ಸಾಂಸ್ಕøತಿಕ ಆರೋಗ್ಯ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕರೀಂ ಚೌಕಿ ಸ್ವಾಗತಿಸಿದರು. ಹಮೀದ್ ಚೇರಂಗೈ ವಂದಿಸಿದರು.