HEALTH TIPS

ವಿದೇಶಿ ಪೌರತ್ವ ಪಡೆದವರ ಪೈಕಿ ಭಾರತೀಯರೇ ಮುಂಚೂಣಿಯಲ್ಲಿ

              ವದೆಹಲಿ: ದೇಶಗಳಿಗೆ ವಲಸೆ ಹೋಗುವಲ್ಲಿ ಮತ್ತು ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಇತ್ತೀಚಿನ ವರದಿಯೊಂದರಲ್ಲಿ ಹೇಳಿದೆ. ಆ ಪೈಕಿ ಅಮೆರಿಕದ ಪೌರತ್ವವೇ ಅಗ್ರಸ್ಥಾನದಲ್ಲಿದೆ.

            ಆದರೆ, ವಿದೇಶೀಯರಿಗೆ ಪೌರತ್ವ ಮಂಜೂರು ಮಾಡುವಲ್ಲಿ ಕೆನಡಾ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ.

              ಶ್ರೀಮಂತ ದೇಶಗಳ ಪೌರತ್ವ ಗಳಿಸುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ ಎಂದು 'ಅಂತಾರಾಷ್ಟ್ರೀಯ ವಲಸೆ ಮುನ್ನೋಟ: 2023' ಶೀರ್ಷಿಕೆಯ ವರದಿ ತಿಳಿಸಿದೆ. ಕೆನಡಾದಲ್ಲಿ ಪೌರತ್ವ ನೀಡಿಕೆ ಪ್ರಮಾಣ 2021 ಮತ್ತು 2022ರ ನಡುವೆ ಶೇಕಡ 174ರಷ್ಟು ಏರಿಕೆ ದಾಖಲಾಗಿದೆ. ಇದರೊಂದಿಗೆ ವಲಸಿಗರಲ್ಲಿ ಪೌರತ್ವ ಪಡೆಯುವ ನೆಚ್ಚಿನ ತಾಣವಾಗಿ ಕೆನಡಾ ಹೊರಹೊಮ್ಮಿದೆ.

ಕಳೆದ ವರ್ಷ ಒಇಸಿಡಿ ದೇಶಗಳ ಪೌರತ್ವ ಪಡೆದವರ ಸಂಖ್ಯೆ ಒಟ್ಟು 28 ಲಕ್ಷಕ್ಕೆ ಏರಿದೆ ಎಂದು ಹೇಳಿರುವ ವರದಿ ದೇಶವಾರು ವಿವರವನ್ನು ಒದಗಿಸಿಲ್ಲ. ಆದರೆ, 2019ರಿಂದ ಒಇಸಿಡಿ ದೇಶಗಳ ಪೌರತ್ವ ಗಳಿಸುವಲ್ಲಿ ಭಾರತ ಪ್ರಮುಖ ಮೂಲವಾಗಿರುವುದನ್ನು ಅದು ಎತ್ತಿ ತೋರಿಸಿದೆ. 1.3 ಲಕ್ಷ ಭಾರತೀಯರು 2021ರಲ್ಲಿ ಒಂದು ಒಇಸಿಡಿ ರಾಷ್ಟ್ರದ ನಾಗರಿಕತ್ವ ಪಡೆದಿದ್ದಾರೆ. 2019ರಲ್ಲಿ ಅದು 1.5 ಲಕ್ಷ ಆಗಿತ್ತು. 57,000 ಚೀನೀಯರು ಒಇಸಿಡಿ ಪೌರತ್ವ ಪಡೆಯುವುದರೊಂದಿಗೆ ಐದನೇ ಸ್ಥಾನದಲ್ಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries