ಕಾಸರಗೋಡು: ಭಕ್ತರ ನಡಿಗೆ ಭಗವಂತನೆಡೆಗೆ ಕಾರ್ಯಕ್ರಮದನ್ವಯ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪಾದಯಾತ್ರೆ ಅ. 15ರಂದು ನಡೆಯಲಿರುವುದು.
ಸಮಾಜದ ಶಾಂತಿ ಮತ್ತು ಒಗ್ಗಟ್ಟಿಗಾಗಿ ಭಕ್ತರ ನಡಿಗೆ ಭಗವಂತನೆಡೆಗೆ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಎಡನೀರು ಮಠದ ಶ್ರೀಗಳು ಕಾರ್ಯಕ್ರಮ ಹಮ್ಮಿಕೊಮಡಿದ್ದಾರೆ. 15ರಂದು ಬೆಳಗ್ಗೆ 6.30ಕ್ಕೆ ಎಡನೀರಿನಿಂದ ಆರಂಭಗೊಳ್ಳುವ ಪಾದಯಾತ್ರೆ, 7.30ಕ್ಕೆ ಬೋವಿಕ್ಕಾನ ಸನಿಹದ ಪೊವ್ವಲ್ ಶ್ರೀ ಹನುಮಾನ್ ಕೋಟೆಗೆ ಪ್ರದಕ್ಷಿಣೆಯಾಗಿ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದಏವಸ್ಥಾನ ತಲುಪಲಿದೆ. ಈ ಸಮದರ್ಭ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸವಾಮೀಜಿ ಅವರು ದಿವ್ಯ ಉಪಸ್ಥಿತಿ ವಹಿಸುವರು. ನೂರಾರು ಮಂದಿ ಭಕ್ತಾದಿಗಳು ಪಾದಯಾಥ್ರೆಯಲ್ಲಿ ಪಾಲ್ಗೊಳ್ಳುವರು.