ಸಮರಸ ಚಿತ್ರಸುದ್ದಿ: ಕಾಸರಗೋಡು ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಕಸರಗೋಡು ಉಪ ಜಿಲ್ಲಾ ಶಾಲಾ ವಿಜ್ಞಾನಮೇಳದ ಲಾಂಛನವನ್ನು ನಗರಸಭೆ ಅಧ್ಯಕ್ಷ ವಕೀಲ ವಿ. ಎಂ. ಮುನೀರ್ ಉದ್ಘಾಟಿಸಿದರು. ನಗರಸಭಾ ಸದಸ್ಯೆ ಅಶ್ವಿನಿ ನಾಯಕ್, ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಭರ್ನಾಡ್ ಮೊಂತೆರೊ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ. ಆರ್.ಹರೀಶ್, ಶಾಲಾ ಮುಖ್ಯ ಶಿಕ್ಷಕಿ ಯಶೋಧ, ಶ್ರೀನಿವಾಸ್ ಉಪಸ್ಥಿತರಿದ್ದರು.