ತಿರುವನಂತಪುರಂ: ಅನಂತಪುರಿಯಿಂದ ಸಿದ್ಧಗೊಳ್ಳುತ್ತಿರುವ ಅಕ್ಷರ ಪೂಜೆಗಾಗಿ ನಿನ್ನೆ ಬೆಳಗ್ಗೆ ಕನ್ಯಾಕುಮಾರಿ ಪದ್ಮನಾಭಪುರಂ ಅರಮನೆಯಿಂದ ನವಗ್ರಹ ಮೂರ್ತಿಗಳ ಮೆರವಣಿಗೆ ಹೊರಟಿತು.
ಪದ್ಮನಾಭಪುರಂ ತೇವರಕಟ್ಟು ಸರಸ್ವತಿ ದೇವಿ, ವೇಲಿಮಲ ಕುಮಾರಸ್ವಾಮಿ ಮತ್ತು ಸುಚೀಂದ್ರಂ ವಿಗ್ರಹಗಳು ಹೊರಟಿವೆ. ಅರಮನೆಯ ಉಪ್ಪರಿಗೆ ಮಾಳಿಗೆಯಲ್ಲಿ ಬೆಳಗ್ಗೆ 8 ಗಂಟೆಗೆ ಸಂಪ್ರದಾಯದಂತೆ ಗೌರವ ವಿನಿಮಯ, ಭಂಡಾರ ಹಸ್ತಾಂತರ ನಡೆಯಿತು.
ಕೇರಳದ ಪುರಾತತ್ವ ನಿರ್ದೇಶಕ ದಿನೋಶನ್ ಅವರು ತೇವರಪುರದಲ್ಲಿ ರೇμÉ್ಮ ಹೊದಿಕೆಯ ಪೀಠದ ಮೇಲೆ ಇರಿಸಲಾಗಿದ್ದ ಗೌರವ ವತ್ತಳೆಗಳನ್ನು ಸಚಿವ ಕೆ ರಾಧಾಕೃಷ್ಣನ್ ಅವರಿಗೆ ನೀಡಿದರು. ಬಳಿಕ ಕನ್ಯಾಕುಮಾರಿ ದೇವಸ್ವಂ ಜಂಟಿ ಆಯುಕ್ತ ರತ್ನವೇಲ್ ಪಾಂಡಿಯನ್ ಅವರಿಗೆ ಗೌರವ ನೀಡಲಾಯಿತು. ಇದಾದ ಬಳಿಕ ಮೆರವಣಿಗೆಯಲ್ಲಿ ಖಡ್ಗದೊಂದಿಗೆ ಬಂದಿದ್ದ ದೇವಸ್ವಂ ವ್ಯವಸ್ಥಾಪಕ ಮೋಹನಕುಮಾರ್ ಅವರಿಗೆ ನೀಡಲಾಯಿತು.
ಮಹಾರಾಜರು ಮೆರವಣಿಗೆಯ ಜೊತೆಯಲ್ಲಿದ್ದಾರೆ ಎಂಬುದನ್ನು ಸಂಕೇತಿಸಲು ಗೌರವ ವಸ್ತ್ರಗಳನ್ನು ಒಯ್ಯಲಾಗುತ್ತದೆ. ತಿರುವನಂತಪುರಕ್ಕೆ ಆಗಮಿಸಿದಾಗ, ತಿರುವಾಂಕೂರು ರಾಜಮನೆತನವು ಆದರದಿಂದ ಸ್ವಾಗತಿಸಲಾಗುತ್ತದೆ. ಕೋಟೆಯ ಒಳಗಿನ ನವರಾತ್ರಿ ಮಂಟಪದಲ್ಲಿ ನಡೆಯುವ ಪೂಜೆಯಲ್ಲಿ ತಂದ ಭಂಡಾರಕ್ಕೆ ಪೂಜೆ ಸಲ್ಲಿಸಲಾಗುವುದು. ಇದನ್ನು ಉಡವಾಲ್ ಎಂದು ಕರೆಯಲಾಗುತ್ತಿದ್ದು, ಹಸ್ತಾಂತರ ವೇಳೆ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಮತ್ತು ಕೇಂದ್ರ ಸಚಿವ ವಿ ಮುರಳೀಧರನ್ ಸೇರಿದಂತೆ ಹಲವರು ಭಾಗವಹಿಸಿದ್ದರು.