. ಕಾಸರಗೋಡು: ಕಠಿಣ ಪರಿಶ್ರಮ ಮತ್ತು ನಿಷ್ಠೆಯಿಂದ ಮಾತ್ರ ಪರಿಪೂರ್ಣ ಕಲಾವಿದನಾಗಲು ಸಾಧ್ಯ ಎಂಬುದಾಗಿ ಖ್ಯಾತ ಚಲನಚಿತ್ರ-ರಂಗ ಭೂಮಿ ಕಲಾವಿದ ಭೋಜರಾಜ ವಾಮಂಜೂರು ತಿಳಿಸಿದ್ದಾರೆ.
ಅವರು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಸಾಮಾಜಿಕ, ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೆಹರಂಗ ಸಾದರಪಡಿಸಿದ''ಕನ್ನಡ ವಿದ್ಯಾರ್ಥಿ ಕಲರವ'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಎಳವೆಯಲ್ಲೇ ಅವಕಾಶ ಹಾಗೂ ವೇದಿಕೆ ಕಲ್ಪಿಸಿಕಟ್ಟಗ ಅವರು ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಲು ಸಾಧ್ಯ. ಕಲಾದೇಗುಲದಂತಿರುವ ರಂಗಚಿನ್ನಾರಿ ಸಂಸ್ಥೆ ಕಲಾವಿದರನ್ನು ಪೋಷಿಸುತ್ತಿರುವ ಕೇಂದ್ರವಾಗಿರುವುದಾಗಿ ತಿಳಿಸಿದರು.
ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಎಸ್. ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಎಸ್.ಜೆ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಆಗ್ರಹ ಹೊಂದಿರಬೇಕು ಮತ್ತು ಇದನ್ನು ಈಡೇರಿಸಲು ಕಠಿಣ ಪರಿಶ್ರಮಿಗಳಾಗಬೇಕು. ಜೀವನ ಕೇವಲ ಹಣಸಂಪಾದನೆಗಾಗಿ ಮೀಸಲಿರಿಸದೆ, ಉತ್ತಮ ಜೀವನ ರೂಪಿಸಲು ಮುಡಿಪಾಗಿರಿಸಬೇಕು ಎಂದು ತಿಳಿಸಿದರು. ಸ್ನೇಹರಂಗ ಮಾರ್ಗದರ್ಶಕಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತಾ ಚೇವಾರ್ ಗೌರವ ಉಪಸ್ಥಿತಿ ವಹಿಸಿದ್ದರು. ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ, ಸ್ನೇಹರಂಗ ಅಧ್ಯಕ್ಷ ಲೋಹಿತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವೃಂದಗಾನ, ಸಮೂಹ ನೃತ್ಯ, ಕವಿತಾವಾಚನ, ಕಂಠಪಾಠ, ಭರತನಾಟ್ಯ, ಲಘುಸಂಗೀತ, ನಾಟಕ, ಯಕ್ಷಗಾನ ನೃತ್ಯ ಸೇರಿದಂತೆ ಸಾಂಸ್ಕøತಿಕ ವೈವಿಧ್ಯ ನಡೆಯಡೆಯಿತು.