ನವದೆಹಲಿ: ನವರಾತ್ರಿಗೆ ಮುನ್ನ ಪ್ರಧಾನಿ ಮೋದಿ ಅವರು ಸಾಹಿತ್ಯ ಬರೆದಿರುವ ಹೊಸ ಹಾಡು 'ಗಾರ್ಬೋ' ಬಿಡುಗಡೆಯಾಗಿದೆ. ಈ ಹಾಡಿಗೆ ಗಾಯಕಿ ಧ್ವನಿ ಭಾನುಶಾಲಿ ಧ್ವನಿಯಾಗಿದ್ದು, ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜಿಸಿದ್ದಾರೆ. ಜಾಕಿ ಭಗ್ನಾನಿ ಹಾಡನ್ನು ನಿರ್ಮಿಸಿದ್ದಾರೆ.
ನವದೆಹಲಿ: ನವರಾತ್ರಿಗೆ ಮುನ್ನ ಪ್ರಧಾನಿ ಮೋದಿ ಅವರು ಸಾಹಿತ್ಯ ಬರೆದಿರುವ ಹೊಸ ಹಾಡು 'ಗಾರ್ಬೋ' ಬಿಡುಗಡೆಯಾಗಿದೆ. ಈ ಹಾಡಿಗೆ ಗಾಯಕಿ ಧ್ವನಿ ಭಾನುಶಾಲಿ ಧ್ವನಿಯಾಗಿದ್ದು, ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜಿಸಿದ್ದಾರೆ. ಜಾಕಿ ಭಗ್ನಾನಿ ಹಾಡನ್ನು ನಿರ್ಮಿಸಿದ್ದಾರೆ.
'ಗಾರ್ಬೋ'ಗೆ ಸಾಹಿತ್ಯ ಬರೆದ ಪ್ರಧಾನಿ:
ಸದಾ ರಾಜಕಾರಣದಲ್ಲಿ ಸಕ್ರಿಯರಾಗಿರುವ ಪ್ರಧಾನಿ ಮೋದಿ ನವರಾತ್ರಿಯ ಹೊಸ ಹಾಡು 'ಗಾರ್ಬೋ'ಗೆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಮೂಲಕ ಏಕತೆಯ ಸಂದೇಶ ಸಾರಿದ್ದಲ್ಲದೆ, ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿ ತೋರಿಸಲಾಗಿದೆ. ವಿಶೇಷವಾಗಿ ಗುಜರಾತ್ ರಾಜ್ಯದ ಸಾಂಸ್ಕೃತಿಕ ವೈಭವವನ್ನು ಬಿಂಬಿಸಲಾಗಿದೆ. ಭಾನುಶಾಲಿ ಹಾಡಿಗೆ ಧ್ವನಿಯಾಗುವುದರ ಜತೆಗೆ ವಿಡಿಯೊದಲ್ಲಿ ನಟಿಸಿದ್ದಾರೆ.
ಇಂದು ಬಿಡುಗಡೆಯಾದ 190 ಸೆಕೆಂಡ್‌ಗಳ ಈ ಹಾಡನ್ನು ವರ್ಷಗಳ ಹಿಂದೆ ಬರೆದಿದ್ದಾಗಿ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ಟೈಮ್‌ಲೈನ್‌ನಲ್ಲಿ ಹೇಳಿಕೊಂಡಿದ್ದಾರೆ. 'ಕಳೆದ ಕೆಲವು ದಿನಗಳಿಂದ ನಾನು ಹೊಸ ಗಾರ್ಬೋವನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾನೆ. ಹಾಡನ್ನು ಸುಂದರವಾಗಿ ಕಟ್ಟಿಕೊಟ್ಟಿರುವುದಕ್ಕೆ ಧ್ವನಿ ಭಾನುಶಾಲಿ, ತನಿಷ್ಕ್ ಬಾಗ್ಚಿ, ಜಸ್ಟ್ ಮ್ಯೂಸಿಕ್ ಮತ್ತು ತಂಡಕ್ಕೆ ಧನ್ಯವಾದಗಳು. ಈ ಮೂಲಕ ನನ್ನ ಹಳೆಯ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದ್ದೀರಿ. ನವರಾತ್ರಿಯ ಸಂದರ್ಭದಲ್ಲಿ ನಾನು ಇದನ್ನು ಹಂಚಿಕೊಳ್ಳುತ್ತೇನೆ' ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾರ್ಬೋ ಹಾಡನ್ನು ಬಾಲಿವುಡ್ ನಟ ಮತ್ತು ನಿರ್ಮಾಪಕ ಜಾಕಿ ಭಗ್ನಾನಿ ನಿರ್ಮಾಣ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಪ್ರಧಾನಿ ಮೋದಿಯವರೊಂದಿಗೆ ವಿಶೇಷ ಹಾಡಿನ ಭಾಗವಾಗಿರುವುದಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷವಿದೆ. ಗಾರ್ಬೋ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ನವರಾತ್ರಿಗೆ ಕೊಟ್ಟ ಗೌರವವಾಗಿದೆ. ಇದು ಮುಂದಿನ ಹಲವು ವರ್ಷಗಳವರೆಗೆ ನವರಾತ್ರಿ ಆಚರಣೆಗಳ ಅವಿಭಾಜ್ಯ ಅಂಗವಾಗಲಿದೆ' ಎಂದು ಹೇಳಿದ್ದಾರೆ.
ಮ್ಯೂಸಿಕ್ ಲೇಬಲ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಗಾರ್ಬೋ ಹಾಡು ಕೇವಲ 3 ಗಂಟೆಗಳಲ್ಲಿ 2.4 ಲಕ್ಷ ವೀಕ್ಷಣೆ ಕಂಡಿದೆ.