ಹಾಂಗ್‌ಝೌ: ನಾಲ್ಕನೇ ಬೋರ್ಡ್‌ನಲ್ಲಿ ಅರ್ಜುನ್ ಇರಿಗೇಶಿ ದಾಖಲಿಸಿದ ಗೆಲುವಿನಿಂದ ಅಗ್ರ ಶ್ರೇಯಾಂಕದ ಭಾರತ ಪುರುಷರ ತಂಡ, ಏಷ್ಯನ್ ಗೇಮ್ಸ್ ಚೆಸ್ ತಂಡ ವಿಭಾಗದ ಏಳನೇ ಸುತ್ತಿನಲ್ಲಿ ಗುರುವಾರ ವಿಯೆಟ್ನಾಂ ತಂಡವನ್ನು 2.5-1.5 ಅಂಕಗಳಿಂದ ಸೋಲಿಸುವಲ್ಲಿ ಯಶಸ್ವಿ ಆಯಿತು.
ಹಾಂಗ್‌ಝೌ: ನಾಲ್ಕನೇ ಬೋರ್ಡ್‌ನಲ್ಲಿ ಅರ್ಜುನ್ ಇರಿಗೇಶಿ ದಾಖಲಿಸಿದ ಗೆಲುವಿನಿಂದ ಅಗ್ರ ಶ್ರೇಯಾಂಕದ ಭಾರತ ಪುರುಷರ ತಂಡ, ಏಷ್ಯನ್ ಗೇಮ್ಸ್ ಚೆಸ್ ತಂಡ ವಿಭಾಗದ ಏಳನೇ ಸುತ್ತಿನಲ್ಲಿ ಗುರುವಾರ ವಿಯೆಟ್ನಾಂ ತಂಡವನ್ನು 2.5-1.5 ಅಂಕಗಳಿಂದ ಸೋಲಿಸುವಲ್ಲಿ ಯಶಸ್ವಿ ಆಯಿತು.
ಎರಡನೇ ಶ್ರೇಯಾಂಕದ ಭಾರತ ಮಹಿಳಾ ತಂಡ ಏಳನೇ ಸುತ್ತಿನಲ್ಲಿ ಕಜಕಸ್ತಾನ ತಂಡದ ಎದುರು 2-2 ರಿಂದ 'ಡ್ರಾ' ಮಾಡಿಕೊಳ್ಳಬೇಕಾಯಿತು.
ಭಾರತದ ಎರಡೂ ತಂಡಗಳು ತಲಾ 11 ಪಾಯಿಂಟ್ಸ್ ಕಲೆಹಾಕಿದ್ದು, ಎರಡನೇ ಸ್ಥಾನ ಕಾಪಾಡಿಕೊಂಡಿವೆ. ಇನ್ನು ಎರಡು ಸುತ್ತಿನ ಪಂದ್ಯಗಳು ಉಳಿದಿವೆ. ಇರಾನ್ (12) ಪುರುಷರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಉಜ್ಬೇಕಿಸ್ತಾನ (10) ಮೂರನೇ ಸ್ಥಾನದಲ್ಲಿದೆ.
ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿ.ಗುಕೇಶ್, ಆರ್.ಪ್ರಜ್ಞಾನಂದ ಮತ್ತು ವಿದಿತ್ ಎಸ್.ಗುಜರಾತಿ ತಮ್ಮ ಪಂದ್ಯಗಳನ್ನು ವಿಯೆಟ್ನಾಮಿನ ಎದುರಾಳಿಗಳ ಎದುರು ಡ್ರಾ ಮಾಡಿಕೊಂಡರು. ಇರಿಗೇಶಿ ಕೊನೆಯ ಬೋರ್ಡ್‌ನಲ್ಲಿ ತುವಾನ್ ಮಿನ್ ತ್ರಾನ್ ಎದುರು ಗೆದ್ದ ಕಾರಣ ಭಾರತ ಬಚಾವಾಯಿತು.
ಭಾರತ ಪುರುಷರ ತಂಡ ಶುಕ್ರವಾರ ಎಂಟನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ.
ಮಹಿಳಾ ವಿಭಾಗದಲ್ಲಿ ಭಾರತ ಮೂರನೇ ಶ್ರೇಯಾಂಕದ ಕಜಕಸ್ತಾನ ಎದುರು ಡ್ರಾ ಮಾಡಿಕೊಂಡಿತು. ಎರಡನೇ ಬೋರ್ಡ್‌ನಲ್ಲಿ ಹಾರಿಕಾ, ಕಮಾಲಿದೇನೋವಾ ವಿರುದ್ಧ ಗೆದ್ದರೆ, ಮೂರನೇ ಬೋರ್ಡ್‌ನಲ್ಲಿ ವೈಶಾಲಿ, ಝನ್ಸಾಯಾ ಅಬ್ದುಮಲಿಕ್ ಎದುರು ಸೋಲನುಭವಿಸಿದರು. ಕೋನೇರು ಹಂಪಿ (ಮೊದಲ ಬೋರ್ಡ್) ಮತ್ತು ವಂತಿಕಾ ಅಗರವಾಲ್ (ನಾಲ್ಕನೇ ಬೋರ್ಡ್) ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರು.
ಇಂಡೊನೇಷ್ಯಾ ತಂಡವನ್ನು 3.5-0.5ರಿಂದ ಸದೆಬಡಿದ ಅಗ್ರ ಶ್ರೇಯಾಂಕದ (13 ಪಾಯಿಂಟ್ಸ್) ಅಗ್ರಸ್ಥಾನದಲ್ಲಿ ಮುಂದುವರಿಸಿದೆ. ಭಾರತ ವಿರುದ್ಧ ಮುನ್ನಡೆಯನ್ನು ಎರಡು ಪಾಯಿಂಟ್‌ಗಳಿಗೆ ಬೆಳೆಸಿದೆ.
ಭಾರತ ಮಹಿಳಾ ತಂಡ ಎಂಟನೇ ಸುತ್ತಿನ ಪಂದ್ಯವನ್ನು ಶುಕ್ರವಾರ ಚೀನಾ ವಿರುದ್ಧ ಆಲಡಿದೆ.