ಕಾಸರಗೋಡು: ಯಾಂತ್ರೀಕರಣ ಮತ್ತು ಕೃತಕ ಬುದ್ಧಿಮತ್ತೆ(ಎ.ಐ)ಭಾರತೀಯ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಜರುಗಿತು. ಕಾಲೇಜು ಶಿಕ್ಷಣ ಇಲಾಖೆಯ ಅನುದಾನದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಲೇಝು ಪ್ರಾಂಶುಪಾಲ ಡಾ. ವಿ.ಎಸ್. ಅನಿಲ್ ಕುಮಾರ್ ಸಮಾರಂಭ ಉದ್ಘಾಟಿಸಿದರು. ಚೆನ್ನೈ ಐಐಟಿ ಪ್ರಾಧ್ಯಾಪಕ ಮತ್ತು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮಾಜಿ ಸದಸ್ಯ ಡಾ. ಎಂ. ಸುರೇಶ್ ಬಾಬು ಅವರು ತಂತ್ರಜ್ಞಾನ ಮತ್ತು ಉದ್ಯೋಗ ಕುರಿತು ಮುಖ್ಯ ಭಾಷಣ ಮಾಡಿದರು. ಅರ್ಥಶಾಸ್ತ್ರವಿಭಾಗದ ಮುಖ್ಯಸ್ಥ ಡಾ. ರೇಜುನ ಕೆ.ಎ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಡಾ. ಅನಂತಪದ್ಮನಾಭ, ಐಕ್ಯೂಎಸಿ ಸಂಯೋಜಕ ಡಾ. ಜಿಜೋ ಪಿ.ಯು, ಇಲಾಖೆಯ ಮಾಜಿ ಅಧ್ಯಕ್ಷ ಡಾ. ಹರಿಕುರುಪ್ ಹಾಗೂ ಕಾಲೇಜು ಯೂನಿಯನ್ ಚೇರ್ಮನ್ ಸರ್ಬಾಜ್ ಅತೀಫ್ ಉಪಸ್ಥಿತರಿದ್ದರು. ವಿಚಾರ ಸಂಕಿರಣ ಸಂಯೋಜಕ ಡಾ. ರತೀಶ್ ಪಿ.ಕೆ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಯು. ಬಾಲಕೃಷ್ಣ ವಂದಿಸಿದರು.