ಮಂಜೇಶ್ವರ: 2018 ರಲ್ಲಿ ಸ್ಥಾಪಿತಗೊಂಡ ಪೊಸೋಟ್ ಮಹಲ್ ಯೂತ್ ವಿಂಗ್ ಸಂಘಟನೆ ತನ್ನ ಸುದೀರ್ಘವಾದ ಐದು ವರ್ಷಗಳ ಕಾರ್ಯಾಚರಣೆಯ ಕಾಲಾವಧಿಯಲ್ಲಿ ಹಲವಾರು ಜನಪರ ಸಮಾಜ ಸೇವಾ ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ದೇಶ ವಿದೇಶಗಳಲ್ಲೂ ತನ್ನ ಶಾಖೆಗಳನ್ನು ಬಲಪಡಿಸಿಕೊಂಡು ಕಾಸರಗೋಡು ಜಿಲ್ಲೆಯಲ್ಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಸಂಘಟನೆಯ ಸದಸ್ಯರು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಭಾಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತು.
ಮಂಜೇಶ್ವರ ಪೊಸೋಟ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಪೊಸೋಟ್ ಜುಮಾ ಮಸೀದಿ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಮಹಲ್ ಯೂತ್ ವಿಂಗ್ ಹಾಗೂ ಯೇನಪೆÇೀಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಸಹಯೋಗದೊಂದಿಗೆ ಸಂಘಟನೆಯ ಕಚೇರಿ ಪರಿಸರದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಬಿ ಎಂ ಮನ್ಸೂರ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಮೊದಲ ರಕ್ತದಾನ ಮಾಡಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಸಂಘಟನೆಯ ವತಿಯಿಂದ ಶಾಸಕರನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಸಂಘಟನೆಯ ಅಧ್ಯಕ್ಷ ಮಂದ್ರಿ ಸಿದ್ದೀಖ್, ಜನಪ್ರತಿನಿಧಿಗಳಾದ ಯಾದವ ಬಡಾಜೆ, ಹಮೀದ್ ಹೊಸಂಗಡಿ, ನ್ಯಾಯವಾದಿ. ಕರೀಂ ಪುಣೆ, ಬಿ.ಎಂ ಮಹ್ಮೂದ್ ಹಾಜಿ, ಎಂ.ಎಂ.ಕೆ. ಬಾವ ಹಾಜಿ, ಮೊದಲಾದವರು ಶುಭಹಾರೈಸಿ ಮಾತನಾಡಿದರು.
ಸಂಘಟನೆಯ ಕಾರ್ಯದರ್ಶಿ ಬಿ.ಎಸ್. ಸಿರಾಜ್, ಕೋಶಾಧಿಕಾರಿ ಜಾಸಿರ್, ಪದಾಧಿಕಾರಿ ಹಮೀದ್, ಲತೀಫ್ ಬನಾನ, ಸದಸ್ಯರುಗಳಾದ ಪಿ.ಕೆ. ಕುಂಞಮೋನು, ಹನೀಫ್, ಸಿದ್ದೀಖ್ ಇಸ್ಮಾಯಿಲ್, ಸಮೀರ್ ಅಲ್ ಮದೀನಾ, ರಹೀಂ ಮೊದಲಾದವರು ರಕ್ತದಾನ ಶಿಬಿರಕ್ಕೆ ನೇತೃತ್ವ ನೀಡಿದ್ದರು.