HEALTH TIPS

ಯುದ್ಧ ವಿಮಾನ ಎಂಜಿನ್ ತಯಾರಿಕೆ: ಫ್ರಾನ್ಸ್‌ ರಕ್ಷಣಾ ಸಚಿವರೊಂದಿಗೆ ರಾಜನಾಥ ಚರ್ಚೆ

                ವದೆಹಲಿ: ಫ್ರಾನ್ಸ್ ಪ್ರವಾಸದಲ್ಲಿರುವ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಫ್ರಾನ್ಸ್ ರಕ್ಷಣಾ ಸಚಿವ ಸೆಬಾಸ್ಟೀನ್ ಲೆಕೊರ್ನು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

                ಈ ಕುರಿತು ಪ್ರತಿಕ್ರಿಯಿಸಿರುವ ರಾಜನಾಥ ಸಿಂಗ್, ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವಣ ಕಾರ್ಯತಂತ್ರದ ಪಾಲುದಾರಿಕೆ ಎಂದಿಗಿಂತಲೂ ಹೆಚ್ಚು ಪ್ರಸ್ತುತವೆನಿಸಿದ್ದು, ಉಭಯ ದೇಶಗಳು ಈ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಎದುರು ನೋಡುತ್ತಿವೆ ಎಂದು ಹೇಳಿದ್ದಾರೆ.

                  ಪ್ಯಾರಿಸ್ ಬಳಿ ಫ್ರೆಂಚ್ ಸಂಸ್ಥೆಯ ಸಫ್ರಾನ್ ಜೆಟ್ ಎಂಜಿನ್ ತಯಾರಿಕಾ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದ ರಾಜನಾಥ ಸಿಂಗ್, ಏರೋ-ಎಂಜಿನ್ ತಂತ್ರಗಾರಿಕೆಯನ್ನು ವೀಕ್ಷಿಸಿದರು.

                     ರಾಜನಾಥ ಸಿಂಗ್ ಅವರ ಭೇಟಿಯು ಮಹತ್ವದೆನಿಸಿದ್ದು, ಮೆಗಾ ಯೋಜನೆಯ ಸಹಭಾಗಿತ್ವದಲ್ಲಿ ಭಾರತದಲ್ಲಿ ಯುದ್ಧ ವಿಮಾನ ಎಂಜಿನ್ ಅಭಿವೃದ್ಧಿಪಡಿಸಲು ಸಫ್ರಾನ್ ಎದುರು ನೋಡುತ್ತಿದೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries