ಚೆನ್ನೈ: ಕೇರಳಕ್ಕೆ ಮತ್ತೊಂದು ವಂದೇಭಾರತ್ ರೈಲು ಮಂಜೂರಾಗಿದೆ ಎಂದು ತಿಳಿದುಬಂದಿದೆ. ಹೊಸ ವಂದೇಭಾರತ್ ಸೇವೆಯು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸಲಿದೆÉ.
ಚೆನ್ನೈನಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಎರ್ನಾಕುಳಂಗೆ ಈ ವಂದೇ ಭಾರತ್ ಸೇವಾ ಜಾಲ ಇರಲಿದೆ.
ಮೂರು ರಾಜ್ಯಗಳನ್ನು ಸಂಪರ್ಕಿಸುವ ಎಂಟು ಸೇವೆಗಳನ್ನು ನಡೆಸಲು ದಕ್ಷಿಣ ರೈಲ್ವೆ ಯೋಜಿಸಿದೆ. ಚೆನ್ನೈ-ಬೆಂಗಳೂರು ಮತ್ತು ಬೆಂಗಳೂರು-ಎರ್ನಾಕುಳಂ ಸೌತ್ ಎಂಬ ಒಟ್ಟು ಎಂಟು ಸೇವೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಸಂಜೆ ಚೆನ್ನೈ ಕೇಂದ್ರದಿಂದ ಹೊರಟು ಬೆಳಗ್ಗೆ 4 ಗಂಟೆಗೆ ಬೆಂಗಳೂರು ತಲುಪಲಿದೆ. ನಂತರ ನಾಲ್ಕೂವರೆ ಗಂಟೆಗೆ ಹೊರಟು ಎರ್ನಾಕುಳಂ ತಲುಪಲಿದೆ. ಹೊಸ ಸೇವೆಗಳು ವಾರಾಂತ್ಯದ ದಟ್ಟಣೆಯನ್ನು ತಗ್ಗಿಸುವ ಲಕ್ಷ್ಯವಿರಿಸಲಾಗಿದೆ.