ಕುಂಬಳೆ: ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆರಿಕ್ಕಾಡಿ ಮೊಯ್ತೀನ್ ಅಝೀಝ್ ಎಂಬವರ ಪುತ್ರ ಮುಹಮ್ಮದ್ ಮುಫೀದ್ ಎಂ.ಎಂ(14) ಬಸ್ ನೊಳಗಿಂದ ಕೆಳಬಿದ್ದು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಬೆಳಗ್ಗೆ ಆರಿಕ್ಕಾಡಿಯಿಂದ ಶಾಲೆಗೆ ಬಸ್ ಮೂಲಕ ತೆರಳುತ್ತಿದ್ದಾಗ ಆರಿಕ್ಕಾಡಿ ತಮರ್ ಹೊಟೇಲ್ ಬಳಿ ಸಂಚರಿಸುತ್ತಿದ್ದ ಬಸ್ ನ ಬಾಗಿಲು ಏಕಾಏಕಿ ತೆರೆದು ವಿದ್ಯಾರ್ಥಿ ಹೊರಗೆಸೆಯಲ್ಪಟ್ಟ. ವಿದ್ಯಾರ್ಥಿ ಕೆಳಬಿದ್ದ ಬಳಿಕ ಬಸ್ ಸುಮಾರು 200 ಮೀಟರ್ ಮುಂದಕ್ಕೆ ಸಂಚರಿಸಿದ್ದು, ನಂತರ ಬಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅದೇ ಬಸ್ ನಲ್ಲಿ ಕುಂಬಳೆಯ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಿದ್ದ ರಭಸಕ್ಕೆ ವಿದ್ಯಾರ್ಥಿಯ ಕೈ ಎಲುಬು ಮುರಿದು, ಕಾಲಿಗೆ ಗಾಯವಾಗಿದೆ. ಉನ್ನತ ಚಿಕಿತ್ಸೆಗೆ ವೈದ್ಯರು ಸೂಚಿಸಿರುವರು.
ಕುಂಬಳೆ ಸರ್ಕಾರಿ: ಹೈಯರ್ ಸೆಕೆಂಡರಿ ಶಾಲಾ ಪಿಟಿಎ ಅಧ್ಯಕ್ಷ ಎ.ಕೆ.ಆರೀಫ್, ಎಂಪಿಟಿಎ ಅಧ್ಯಕ್ಷೆ ವಿನಿಶಾ ಮತ್ತು ಸಿಬ್ಬಂದಿ ಕಾರ್ಯದರ್ಶಿ ದಿನೇಶ್ ಕುಂಬಳೆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ತೆರಿ ಭೇಟಿ ಮಾಡಿದರು.