ಕುಂಬಳೆ: ವಿಮಲಸ್ವರ ಸಂಗೀತ ತಂಡ ಇವರ ನೇತೃತ್ವದಲ್ಲಿ ಬದಿಯಡ್ಕ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸಹಯೋಗದೊಂದಿಗೆ ಸಮೀಪದ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಮೊದಲ ದಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು.
ಸಂಗೀತ ಗುರುಗಳಾದ ಡಾ. ಸ್ನೇಹಾ ಪ್ರಕಾಶ್ ಬದಿಯಡ್ಕ ಇವರ ಆನ್‍ಲೈನ್ ಪಾಠವನ್ನು ಪಡೆಯುತ್ತಿರುವ ಶಿಷ್ಯವೃಂದದವರು ಸಂಗೀತಾರ್ಚನೆ ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಕೌಶಿಕ್ ರಾಮಕೃಷ್ಣನ್ ಸೀತಾಂಗೋಳಿ ಹಾಗೂ ವಯಲಿನ್‍ನಲ್ಲಿ ಸುನಾದ ಪಿ.ಎಸ್. ಮಾವೆ ಜೊತೆಗೂಡಿದರು. ಇದೇ ಸಂದಭರ್Àದಲ್ಲಿ 2022-23ನೇ ಸಾಲಿನ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಂಗೀತಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಂಗೀತ ತಂಡಕ್ಕೆ ಶ್ರೀಕ್ಷೇತ್ರದ ವತಿಯಿಂದ ಶ್ರೀದೇವಿಯ ಪ್ರಸಾದವನ್ನು ನೀಡಿ ಅನುಗ್ರಹಿಸಲಾಯಿತು.