ಕಾಸರಗೋಡು: ಆನ್‍ಲೈನ್ ವಂಚನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಾರಿ ಕಾಸರಗೋಡಿನ ಶಾಸಕರನ್ನೂ ಬಿಡದೆ ವಂಚನಾತಂಡ ತನ್ನ ಕೈಚಳಕ ಪ್ರದರ್ಶಿಸಿದೆ. ಶಾಸಕ ಎನ್.ಎ ನೆಲ್ಲಿಕುನ್ನು ಅವರು 1200ರೂ. ಆನ್‍ಲೈನ್ ಮೂಲಕ ಪಾವತಿಸಿ ಹೊದಿಕೆ ಆರ್ಡರ್ ಮಾಡಿದ್ದರು. ಪಾರ್ಸೆಲ್ ಕೈಸೇರುತ್ತಿದ್ದಂತೆ ತೆರೆದು ನೋಡಿದಾಗ, ಕಳಪೆ ಹೊದಿಕೆಯೊಂದನ್ನು ಕಳುಹಿಸಿಕೊಡಲಾಗಿತ್ತು.
ಆನ್‍ಲೈನ್ ವಂಚನಾಜಾಲದ ಬಗ್ಗೆ ಶಾಸಕ ಎನ್.ಎ ನೆಲ್ಲಿಕುನ್ನು ಸೈಬರ್‍ಸೆಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಹುತೇಕ ಮಂದಿ ಆನ್‍ಲೈನ್ ಮೂಲಕ ಸಾಮಗ್ರಿ ಖರೀದಿಸುತ್ತಿದ್ದು, ಇದರಲ್ಲಿ ವಂಚನೆಗೊಳಗಾಗುತ್ತಿದ್ದರೂ, ದೂರು ನೀಡಲು ಮುಂದಾಗದಿರುವುದರಿಂದ ಪ್ರಕರಣ ಬೆಳಕಿಗೆ ಬರುತ್ತಿಲ್ಲ. ಕೆಲವು ಆನ್‍ಲೈನ್ ಪಾರ್ಸೆಲ್ ಮೂಲಕ ಸಾಮಗ್ರಿ ಬದಲು ಕಲ್ಲು, ಮಣ್ಣು, ಮರದ ಹುಡಿ ಕಳುಹಿಸಿದ ಘಟನೆಯೂ ನಡೆದಿತ್ತು.