ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ತೆಂಕುತಿಟ್ಟು ಯಕ್ಷ ಮಾರ್ಗ-2 ಮತ್ತು ತೆಂಕುತಿಟ್ಟು ಹಿಮ್ಮೇಳ ತರಗತಿಯ ಉದ್ಘಾಟನೆ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಧಾರ್ಮಿಕ ಮುಂದಾಳು, ಉದ್ಯಮಿ ಕೆ.ಕೆ.ಶೆಟ್ಟಿ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಹಾಗೂ ತರಬೇತುಗೊಳಿಸುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ. ಗಂಡುಮೆಟ್ಟಿನ ಕಲೆ ಯಕ್ಷಗಾನ ಸಹಿತ ಕಲೆಗಳ ಪೋಷಣೆಗೆ ಪ್ರತಿಷ್ಠಾನ ನೀಡುತ್ತಿರುವ ಕೊಡುಗೆ ಪ್ರಶಂಸನೀಯ ಎಂದು ತಿಳಿಸಿದರು.
ಕಾರಿಂಜೆಹಳೆಮನೆ ಶಿವರಾಮ್ ಭಟ್‍ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ಯಾಂಪ್ಕೋ ನಿರ್ದೇಶಕ, ಪ್ರಗತಿಪರ ಕೃಷಿಕ ಡಾ. ಜಯಪ್ರಕಾಶ್ ತೊಟ್ಟೆತೋಡಿ, ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರಿಯ ನಾಟ್ಯ ಗುರುಗಳಾದ ಕಗ್ಗಲು ವಿಶ್ವೇಶ್ವರ ಭಟ್, ಪ್ರತಿಷ್ಠಾನದಲ್ಲಿ ಹಿಮ್ಮೇಳ ತರಗತಿಯ ಗುರುಗಳಾದ ರಾಮಮೂರ್ತಿ ಕುದ್ರೆ ಕ್ಕೂಡ್ಲು ಉಪಸ್ಥಿತರಿದ್ದರು. ರಾಜ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿದರು.
ರಾಜರಾಮ ರಾವ್ ಮೀಯಪದವು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಿಮ್ಮೇಳ ತರಗತಿ ಆರಂಭಿಸಲಾಯಿತು. ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ವಿಶೇಷ ಪ್ರಾತ್ಯಕ್ಷಿಕೆ ನಡೆಯಿತು. ತಾಳದ ಸೃಷ್ಟಿ, ಕಾಲ ನಿರ್ಣಯ, ಕಾಲ-ವೇಷ ಸಂಬಂಧ,ಕಾಲ -ವೇಷ- ಗತಿಗಳ ಸಂಬಂಧ, ರಂಗ ಚಲನೆ ಇತ್ಯಾದಿಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿದರು. ಶಂಭಯ್ಯ ಕಂಜರ್ಪಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಿರ್ವಹಿಸಿದರು. 70ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು. ನಾಟ್ಯ ಗುರುಗಳು ಭಾಗವಹಿಸಿದರು.