ಕುಂಬಳೆ: ಪುತ್ತಿಗೆ ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯ ಐ. ಟಿ. ಕ್ಲಬಿನ ಆಶ್ರಯದಲ್ಲಿ ಗಾಂಧಿ ಜಯಂತಿಯ ಅಂಗವಾಗಿ “ಗಾಂಧಿ ದರ್ಶನಂ” ಕಾರ್ಯಕ್ರಮ ನಡೆಯಿತು. ಶಾಲಾ ಸಂಚಾಲಕ ಸುಲೈಮಾನ್ ಕರಿವೆಳ್ಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲ ರೂಪೇಶ್ ಎಂ.ಟಿ, ಹಾಗೂ ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್ ಮಾತನಾಡಿದರು. ರೇμÁ್ಮ. ವಿ.ವಿ ಚರಕ ಪ್ರದರ್ಶನಕ್ಕೆ ಚಾಲನೆ ನೀಡಿ, ಚರಕದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಎರಡನೇ ಭಾಗವಾಗಿ ಗಾಂಧೀಜಿಯವರ ಇತಿಹಾಸದ ಕುರಿತು ಚರ್ಚಾ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ರೂಪೇಶ್ ಎಂ.ಟಿ ಸಂವಾದದ ಸಮನ್ವಯಕರಾಗಿದ್ದರು. ಶಾಲಾ ಅಧ್ಯಾಪಕರು ಭಾಗವಹಿಸಿದವರು. ಐ. ಟಿ. ಕ್ಲಬ್ ಸಂಯೋಜಕಿ ಮಂಜುಳಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಉಮಾದೇವಿ ಸ್ವಾಗತಿಸಿ, ರಾಜೀವ್ ವಂದಿಸಿದರು.