ಇಡುಕ್ಕಿ: ವಿದ್ಯುತ್ ದರ ಏರಿಕೆಯಾಗಲಿದೆ ಎಂದು ಸಚಿವ ಕೆ. ಕೃಷ್ಣನ್‍ಕುಟ್ಟಿ ಸೂಚನೆ ನೀಡಿದ್ದಾರೆ. ಅಲ್ಪ ಪ್ರಮಾಣದ ಹೆಚ್ಚಳದ ಅಗತ್ಯವಿದೆ ಎಂದು ಅವರು ಬಹಿರಂಗಪಡಿಸಿರುವರು.
ಹೊರಗಿನಿಂದ ವಿದ್ಯುತ್ ಖರೀದಿಸುವಾಗ ಬೆಲೆ ನಿಗದಿ ಮಾಡುತ್ತಾರೆ. ಇದಕ್ಕೆ ಅನುಗುಣವಾಗಿ ದರವನ್ನು ಹೆಚ್ಚಿಸಬೇಕಾಗುತ್ತದೆ ಎಂದಿರುವರು.
ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗದಿರುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.ಕೇಂದ್ರ ಸರ್ಕಾರದಿಂದ ಆಮದು ಮಾಡಿಕೊಂಡ ಕಲ್ಲಿದ್ದಲು ಬಳಕೆಗೆ ಮುಂದಾಗಿರುವುದು 17 ಪೈಸೆ ಹೆಚ್ಚಳಕ್ಕೆ ಕಾರಣವಾಗಿದೆÉ ಎಂದಿರುವರು.