ಮುಳ್ಳೇರಿಯ: ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಅಂಗಳದಲ್ಲಿ ವಿವಿಧ ಬಣ್ಣದ ಚೆಂಡು ಮಲ್ಲಿಗೆಗಳು ಅರಳಿ ನಿಂತಿದ್ದು ಗುಂಡ್ಲುಪೇಟೆಯ ಹೂವಿನ ಗದ್ದೆಗಳು ನೆನಪಾಗುತ್ತವೆ. ಶಾಲೆಯ ಉದ್ಯಾನವನದಲ್ಲಿ ಅರಳಿನಿಂತ ವಿವಿಧ ವರ್ಣಗಳ ಚೆಂಡು ಮಲ್ಲಿಗೆಯ ತರಾವರಿ ತಳಿಗಳು ಗಮನ ಸೆಳೆಯುತ್ತಿವೆ.
ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳು ಚೆಂಡುಮಲ್ಲಿಗೆ ಕೃಷಿಗಾಗಿ ಹೂಕುಂಡಗಳನ್ನು ಸಿದ್ಧಪಡಿಸಿದರು. ಎಸ್.ಆರ್.ಜಿ. ಸಂಚಾಲಕ ಕೆ. ಮಿನಿಶ್ ಬಾಬು ಅವರು ಆನ್‍ಲೈನ್‍ನಲ್ಲಿ ಚೆಂಡುಮಲ್ಲಿಗೆಗಳನ್ನು ತರುವ ಮೂಲಕ ಹೂವಿನ ತೋಟದ ಚಟುವಟಿಕೆಗಳನ್ನು ಮುನ್ನಡೆಸಿದರು. ಎಸ್‍ಪಿಸಿ, ಸ್ಕೌಟ್-ಗೈಡ್ ಮತ್ತು ಜೂನಿಯರ್ ರೆಡ್‍ಕ್ರಾಸ್ ಘಟಕಗಳು ತೋಟ ನಿರ್ಮಾಣದಲ್ಲಿ ಭಾಗವಹಿಸಿದ್ದವು. ಮುಖ್ಯಶಿಕ್ಷಕ ಎ.ಎಂ. ಅಬ್ದುಲ್ ಸಲಾಂ ಕೊಯ್ಲು ಉದ್ಘಾಟಿಸಿದರು. ಹಿರಿಯ ಸಹಾಯಕ ಸಿ. ಶಾಂತಕುಮಾರಿ, ಸಿಬ್ಬಂದಿ ಕಾರ್ಯದರ್ಶಿ ಕೆ. ಬಿಂದು, ಮಾರ್ಗದರ್ಶಕ ಶಿಕ್ಷಕಿ ಸಿ. ಸುರಸಿ, ವಿದ್ಯಾರ್ಥಿ ಪೋಲೀಸ್ ಸಿಪಿಒ ಕೆ.ಸಿ.ಸಿಮಿಷಾ, ಎಂ.ಅಂಬಿಕಾ, ಜೂನಿಯರ್ ರೆಡ್ ಕ್ರಾಸ್ ಪ್ರಭಾರಿ ಕೆ. ಶಿಜಿತ್, ಬಿ. ಬೇಬಿ ಉಪಸ್ಥಿತರಿದ್ದರು.