ಮುಳ್ಳೇರಿಯ: ಮುಳ್ಳೇರಿಯ ತಲೆಹೊರೆ ಕಾರ್ಮಿಕ ಘಟಕದ ವತಿಯಿಂದ 25 ವರ್ಷಗಳಿಂದ ತಲೆಹೊರೆ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಿಂಚಿಪದವಿನ ರವಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ. ಪಿ. ಮುರಳೀಧರನ್ ಉದ್ಘಾಟಿಸಿದರು. ಪುರುμÉೂೀತ್ತಮ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ನ್ಯಾಯವಾದಿ. ಗೋಪಾಲಕೃಷ್ಣ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಗಣೇಶ್ ವತ್ಸ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಶಿವಕೃಷ್ಣ ಭಟ್, ಬಿಜೆಪಿ ಪಂಚಾಯಿತಿ ಅಧ್ಯಕ್ಷ ವಸಂತ, ಎಬಿವಿಪಿ ಜಿಲ್ಲಾ ಸಮಿತಿ ಸದಸ್ಯ ಶಬರೀಶ್, ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳಾದ ಎಂ.ಕೆ.ರಾಘವನ್ ಕೆ.ಎ., ಶ್ರೀನಿವಾಸನ್ ಮತ್ತು ಪಿ.ದಿನೇಶ್, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್, ಕ್ಷೇತ್ರಾಧ್ಯಕ್ಷ ಆನಂದ. ಸಿ.ಎಚ್., ಕಾರ್ಯದರ್ಶಿ ಭಾಸ್ಕರನ್, ತಲೆಹೊರೆ ಕಾರ್ಮಿಕ ಘಟಕದ ಪ್ರದೇಶ ಪ್ರಭಾರಿ ರವಿ ಎತ್ತುಕ್ಕಲ್ ಮತ್ತಿತರರು ಮಾತನಾಡಿದರು. ದುರ್ಗಾಪ್ರಸಾದ್ ಸ್ವಾಗತಿಸಿ, ಸದಾಶಿವ ವಂದಿಸಿದರು.