ಕುಂಬಳೆ: ಕೊಡ್ಯಮೆ ನುಸ್ರತುಲ್ ಇಸ್ಲಾಂ ಸಂಗಮ ಇದರ 21ನೇ ವಾರ್ಷಿಕೋತ್ಸವ ಹಾಗೂ ಈ ವರ್ಷದ ಮೀಲಾದ್ ಮೆಹಫಿಲ್ ಇಂದಿನಿಂದ (ಅಕ್ಟೋಬರ್ 13) 15 ರವರೆಗೆ ಹಂಝ ಮುಸ್ಲಿಯಾರ್ ನಗರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಸಂಘಟಕರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದು ಮಖಾಂ ಝಿಯಾರತ್ ಹಾಗೂ ಧ್ವಜಜಾಥಾ ನಡೆಯಲಿದ್ದು, 14ರಂದು ಮಧ್ಯಾಹ್ನ 3.30ಕ್ಕೆ ಆಯ್ದ ಮದ್ರಸ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮಿಲಾದ್ ರ್ಯಾಲಿ ನಡೆಯಲಿದೆ.
15 ರಂದು ಬೆಳಿಗ್ಗೆ 9.30 ರಿಂದ ಇಸ್ಲಾಮಿಕ್ ಕಲೆ ಮತ್ತು ಸಾಹಿತ್ಯ ಸ್ಪರ್ಧೆಗಳು ನಡೆಯಲಿದ್ದು, ಎರಡು ವಿಭಾಗಗಳಲ್ಲಿ ಇಪ್ಪತ್ತು ಮದರಸಾಗಳಿಂದ ಎಂಟು ವೇದಿಕೆಗಳಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ರಾತ್ರಿ 8 ಗಂಟೆಗೆ ನಡೆಯುವ ಸಮಾರೋಪ ಸಭೆಯನ್ನು ಕೆ.ಎಸ್.ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಅಬ್ದುಲ್ ಮಜೀದ್ ಫೈಝಿ ಅಧ್ಯಕ್ಷತೆ ವಹಿಸುವರು. ಕೊಡ್ಯಮೆ ಜುಮಾ ಮಸೀದಿ ಖತೀಬ್ ಮಹ್ಮದ್ ಸಅದಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮ ಸಂಯೋಜಕ ಅಬ್ದುಲ್ ಕರೀಂ ದರ್ಬಾರ್ಕಟ್ಟೆ, ಅಧ್ಯಕ್ಷ ಅಶ್ರಫ್ ಕೊಡ್ಯಮೆ, ಅಬೂಬಕರ್ ಸಾಲದ್ ನಿಝಾಮಿ, ಶಾಹುಲ್ ಹಮೀದ್ ಸಅದಿ, ಅಬ್ದುಲ್ ಖಾದರ್ ವಿಲ್ ರೋಡಿ, ಅಬ್ದುಲ್ಲಾ ಮೌಲವಿ, ಜಮಾಅತ್ ಅಧ್ಯಕ್ಷ ಎಂ.ಎಂ.ಕೆ.ಮೊಯ್ತು ಹಾಜಿ, ಕಾರ್ಯದರ್ಶಿ ಅಬೂಬಕರ್ ಪೂಕಟ್ಟೆ, ಅಬ್ದುಲ್ ರಹ್ಮಾನ್ ಕುನ್ನಿಲ್, ಅಬ್ದುಲ್ಲಾ ಹಾಜಿ. ಹಂಝ ಊಜಾರ್ ಮಾತನಾಡುವರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಶ್ರಫ್ ಕೊಡ್ಯಮೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮ್ ಕುನ್ನಿಲ್, ಕೋಶಾಧಿಕಾರಿ ಹಮೀದ್ ಉಜಾರ್, ಸಿದ್ದೀಕ್ ಉಜಾರ್, ಉಮರ್ ಉಜಾರ್, ಫೈಸಲ್ ಉಜಾರ್, ಯೂಸುಫ್ ಕೊಡ್ಯಮೆ, ಅಬ್ದುಲ್ಲಾ ಬಿ.ಪಿ, ಸಹಲ್ ಪೂಕಟ್ಟೆ ಉಪಸ್ಥಿತರಿದ್ದರು.