ಉಪ್ಪಳ : ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವ ಅಂಗವಾಗಿ ಅ. 18ರಿಂದ ಬುಧವಾರ ಬೆಳಿಗ್ಗೆ 10ಕ್ಕೆ ಸರಸ್ವತೀ ಯಾಗ ಪೂಜ್ಯ ಕೊಂಡೆವೂರು ಶ್ರೀಗಳ ದಿವ್ಯಉಪಸ್ಥಿತಿಯಲ್ಲಿ ನಡೆಯಲಿದೆ. ವೇದಮೂರ್ತಿ ಹರಿನಾರಾಯಣ ಮಯ್ಯ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳ ವಿದ್ಯಾಭ್ಯುದಯಕ್ಕಾಗಿ ನಡೆಯಲಿರುವ ಈ ಯಾಗದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಬೆಳಗ್ಗೆ 9.30ಕ್ಕೆ ಮೊದಲು ಯಾಗಮಂಟಪದಲ್ಲಿ ಉಪಸ್ಥಿತರಿರಬೇಕು. ಈ ಯಾಗ ಸೇವೆ ಮಾಡಿಸಿದ ವಿದ್ಯಾರ್ಥಿಗಳಿಗೆ ಪ್ರಸಾದ ರೂಪದಲ್ಲಿ ಸಾರಸ್ವತ ಘೃತವನ್ನು ನೀಡಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.