ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ದ್ವಾರಕಾ ಸೆಕ್ಟರ್ 10 ರ ರಾಮ್ ಲೀಲಾ ಮೈದಾನದಲ್ಲಿ ನಡೆದ ‘ವಿಜಯ ದಶಮಿ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಶ್ರೀ ರಾಮಲೀಲಾ ಸೊಸೈಟಿ ಆಯೋಜಿಸಿದ 11ನೇ ರಾಮಲೀಲಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಬಾಣ ಬಿಡುವ ಮೂಲಕ ರಾವಣನ ಪ್ರತಿಕೃತಿಯನ್ನು ದಹಿಸಿದರು.
ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಎಲ್ಲಾ ಪ್ರಜೆಗಳಿಗೆ ನವರಾತ್ರಿ ಹಾಗೂ ವಿಜಯದಶಮಿ ಶುಭಾಶಯ ಕೋರಿದರು. ದುಷ್ಟರ ವಿರುದ್ಧ ಶಿಷ್ಟರ ವಿಜಯದ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತಿದೆ ಎಂದರು.
#WATCH | Delhi: Prime Minister Narendra Modi at the 'Ravan Dahan' organised at Dwarka Sector 10 Ram Leela, on the occasion of #Dussehra pic.twitter.com/KO20jP9II1
— ANI (@ANI) October 24, 2023
ದೀರ್ಘಕಾಲದ ಕಾಯುವಿಕೆಯ ನಂತರ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದನ್ನು ನೋಡುವ ಭಾಗ್ಯ ನಮ್ಮದಾಗಿದೆ. ಇದು ನಮ್ಮ ತಾಳ್ಮೆಯ ವಿಜಯದ ಸಂಕೇತವಾಗಿದೆ ಎಂದರು.