ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ 'ಮೇರಿ ಮಿಟ್ಟಿ-ಮೇರಾ ದೇಶ್'ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಭಾರ ಉಪಕುಲಪತಿ ಪೆÇ್ರ. ಕೆ.ಸಿ. ಬೈಜು ಸಮಾರಂಭ ಉದ್ಘಾಟಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಗ್ರಹಿಸಿದ ಮಣ್ಣನ್ನು ಅಮೃತ ಕಲಶಕ್ಕೆ ಸುರಿಯಲಾಯಿತು. ವಿಶ್ವವಿದ್ಯಾನಿಲಯದ ಪರವಾಗಿ ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನ ವಿಭಾಗದ ವಿದ್ಯಾರ್ಥಿ ಜಯಕೃಷ್ಣ ಬೋಡೆಪಾಡ್ ಅವರು ಅಮೃತ ಕಲಶವನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ.
ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್ ನಂಬಿಯಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ. ಮುತ್ತುಕುಮಾರ್ ಮುತ್ತುಚ್ಚಾಮಿ, ಎನ್ ಎಸ್ ಎಸ್ ಕಾರ್ಯಕ್ರಮ ಸಂಯೋಜಕ ಡಾ.ಎಸ್ .ಅನ್‍ವಯಗಿ, ಎನ್ ಎಸ್ ಎಸ್ ಸಂಯೋಜಕ ಡಾ.ಪ್ರಕಾಶಬಾಬು ಕೋಡಾಲಿ ಉಪಸ್ಥಿತರಿದ್ದರು.