ಕುಂಬಳೆ: ಕುಂಬಳೆ ಮಹಾತ್ಮಾ ಕಾಲೇಜು ವತಿಯಿಂದ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕುಂಬಳೆ ಪ್ರೆಸ್ ಪೋರಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಶಿಕ್ಷಣದ ಪ್ರಗತಿಗೆ ಶ್ರಮಿಸಲು ಬದ್ಧನಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಹಾತ್ಮ ಕಾಲೇಜು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮಹಾತ್ಮ ಕಾಲೇಜು ಪ್ರಾಚಾರ್ಯ ಕೆ.ಎಂ.ಎ ಸತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಕರಾದ ಇಸ್ಮಾಯಿಲ್ ಆರಿಕ್ಕಾಡಿ, ಅಶೋಕನ್, ಸಂಧ್ಯಾ, ಅಬ್ದುಲ್ ರಹಮಾನ್, ರಂಗರಾಜ್, ಮೋಹನನ್ ನಂಬ್ಯಾರ್, ಹಂಸನಾ, ನವ್ಯಾ ಉಪಸ್ಥಿತರಿದ್ದರು.
ಸಹಪ್ರಾಚಾರ್ಯ ಅಬ್ದುಲ್ ಲತೀಫ್ ಉಳುವಾರ್ ಸ್ವಾಗತಿಸಿ, ವಿದ್ಯಾರ್ಥಿನಿ ರಂಜೀನಾ ವಂದಿಸಿದರು.