HEALTH TIPS

ಕುಂಜರಕಾನದಲ್ಲಿ ನವರಾತ್ರಿ ಸಾಂಸ್ಕøತಿಕ ಉತ್ಸವ

            ಬದಿಯಡ್ಕ : ಎಡನೀರು ಸಮೀಪದ ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ವತಿಯಿಂದ ಸುಮಾರು 3 ಗಂಟೆಗಳ ಕಾಲ ಸಾಹಿತ್ಯ, ಗಾನ, ನೃತ್ಯ ವೈಭವ ವಿಶೇಷ ಕಾರ್ಯಕ್ರಮ ನಡೆಯಿತು. ಡಾ.ವಾಣಿಶ್ರೀ ಕಾಸರಗೋಡು ಅವರು ಸಾಹಿತ್ಯ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಎಂ ಆರ್ ಕಾಸರಗೋಡು, ಭಾಸ್ಕರ ಅಡೂರು, ಹರೀಶ್ ಪಂಜಿಕಲ್ಲು, ಉಷಾ ಸುಧಾಕರನ್ (ಗಾಯನ), ಆದ್ಯಂತ್ ಅಡೂರು (ತಬಲಾವಾದನ ಸಹಿತ ಗಾಯನ), ಅವನಿ ಎಂ ಎಸ್ ಸುಳ್ಯ (ಯೋಗ ನೃತ್ಯ), ಸನುಷ ಸುನಿಲ್, ತನ್ವಿ ಶೆಟ್ಟಿ ಪಾಣಾಜೆ, ಅಹನಾ ಎಸ್ ರಾವ್, ಚೈತ್ರಾ ಎಡನೀರು, ಪ್ರಜ್ವಲ್ ಎ, ಸಂದೇಶ್, ಲೋಹಿತ್, ಸುಶಾಂತ್, ಭೂಮಿಕಾ, ಯುಕ್ತಿ, ಧಿಲಾಕ್ಷಾ, ಗಣಾ, ಆಯುಷ್, ಸಾನ್ವಿತಾ, ದೀಕ್ಷಾ, ರಕ್ಷಾ, ಅಭಿಜ್ಞಾ, ಅಶ್ವತ್, ಹರ್ಷಿತಾ, ಜಸ್ವಿತಾ, ಅಮೋಘ, ಅಮೃತ್, ಐಶ್ವರ್ಯ, ಶಶಾಂಕ್, ಸಹನಾ, ಪ್ರಣಮ್ಯ, ಮಂಜು, ಜಿಶಾ, ಅಕ್ಷತಾ(ನೃತ್ಯ) ಮೊದಲಾದವರು ಭಾಗವಹಿಸಿದ್ದರು.


               ಕಾರ್ಯಕ್ರಮದಲ್ಲಿ ಕುಣಿತ ಭಜನೆಯ ಕಲಾವಿದರನ್ನು ಸಂಸ್ಥೆಯ ವತಿಯಿಂದ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅಭಿನಂದಿಸಿದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಸಂಸ್ಥೆಯ ವತಿಯಿಂದ ಸ್ಮರಣಿಕೆ ಹಾಗೂ ಕುಂಜರಕಾನ ಶ್ರೀಕ್ಷೇತ್ರದ ವತಿಯಿಂದ ಶ್ರೀದೇವರ ಬೆಳ್ಳಿಯ ಪದಕ ಮತ್ತು  ಪ್ರಸಾದವನ್ನು ನೀಡಿ ಕುಂಜರಕಾನ ಶ್ರೀಕ್ಷೇತ್ರದ ಆಡಳಿತ ಮುಕ್ತೇಸರರಾದ ನವೀನ್ ಭಟ್ ಹರಸಿದರು. ಕಾರ್ಯಕ್ರಮದಲ್ಲಿ ಪ್ರಸಾದನ ಕಲಾವಿದ ಪ್ರೇಮರಾಜ್ ಆರ್ಲಪದವು, ಕುಸುಮಾ, ವಿಶ್ವನಾಥ ಬಲವಂತಡ್ಕ, ಶಿವರಾಜ್ ಕೊಚ್ಚಿ ಸಹಿತ ಸಾವಿರಾರು ಮಂದಿ ಭಕ್ತಾಧಿಗಳು ಪ್ರೇಕ್ಷಕರಾಗಿ ಪಾಲ್ಗೊಂಡರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries