ಬದಿಯಡ್ಕ: ಕುಂಬಳೆ ಉಪಜಿಲ್ಲಾಮಟ್ಟದ 2023-24ನೇ ಸಾಲಿನ ವಿಜ್ಞಾನೋತ್ಸವ ಪೆರಡಾಲ ನವಜೀವನ ಶಾಲೆಯಲ್ಲಿ ಶನಿವಾರ ಸಮಾರೋಪಗೊಂಡಿತು. ಪುತ್ತಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳಿಸಲು ಇಂತಹ ವಿಜ್ಞಾನ ಮೇಳಗಳು ಸಹಕಾರಿಯಾಗುತ್ತದೆ ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಲೀಂ ಎಡನೀರು ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧÀರ ಎಂ., ಬದಿಯಡ್ಕ ಪೋಲೀಸ್ ಠಾಣೆಯ ಸಿಐ ವಿನೀಶ್ ವಿ.ಆರ್., ಬದಿಯಡ್ಕ ಅಬಕಾರಿ ಇಲಾಖೆಯ ಸಹಾಯಕ ಇನ್ಸ್‍ಪೆಕ್ಟರ್ ದಿನೇಶನ್ ಕೆ. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ಎಂಪಿಟಿಎ ಅಧ್ಯಕ್ಷೆ ರೇಶ್ಮಾ, ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ, ಹಿರಿಯ ಅಧ್ಯಾಪಕ, ಆಹಾರ ಸಮಿತಿ ಸಂಚಾಲಕ ಟಿ.ಕೇಶವ ಭಟ್, ನವಜೀವನಂ ಪ್ರೋಜೆಕ್ಟ್ ಸಂಚಾಲಕ ವಿ.ಇ.ಉಣ್ಣಿಕೃಷ್ಣನ್, ಕಾರ್ಯಕ್ರಮ ಸಮಿತಿ ಸಹಸಂಚಾಲಕ ನಿರಂಜನ ರೈ ಪೆರಡಾಲ, ಬದಿಯಡ್ಕ ರೋಟರಿ ಇಂಟರ್‍ನ್ಯಾಶನಲ್‍ನ ಕೇಶವ, ನೌಕರ ಸಂಘದ ಕಾರ್ಯದರ್ಶಿ ಪ್ರಭಾವತಿ ಕೆದಿಲಾಯ ಪುಂಡೂರು, ಮುಖ್ಯೋಪಾಧ್ಯಾಯಿನಿ ಮಿನಿ, ಸಹ ಮುಖ್ಯೋಪಾಧ್ಯಾಯಿನಿ ಶಾಹಿದಾ ಬೀವಿ ಟಿ.ಎಚ್., ಶಾಲಾ ಆಡಳಿತ ಮಂಡಳಿಯ ಕೃಷ್ಣಪ್ರಸಾದ ರೈ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ಹಮೀದ್ ಕೆಡೆಂಜಿ, ಬೇಬಿ ಶಾಲಿನಿ, ಸರೋಜಿನಿ, ಆನಂದ ಬದಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿ ಸ್ವಾಗತಿಸಿ, ಸಂಚಾಲಕ ಪ್ರಭಾಕರನ್ ನಾಯರ್ ವಂದಿಸಿದರು. ಪ್ರಚಾರ ಸಮಿತಿಯ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ, ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ರಾಜೀವ್ ಪಿವಿಟಿ ನಿರೂಪಣೆಗೈದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.