ತಿರುವನಂತಪುರ: ದೇಶದ ಹೆಮ್ಮೆಯ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ನ ಭಾಗವಾಗಿರುವ ಕೆಲ್ಟ್ರಾನ್‍ಗೆ ವಿಎಸ್‍ಎಸ್‍ಸಿ ಅಭಿನಂದನೆ ಸಲ್ಲಿಸಿದೆ.
ಗಗನ್ಯಾನ್ ಮಿಷನ್‍ನ ಪರೀಕ್ಷಾ ವಾಹನ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಪ್ಯಾಕೇಜ್‍ಗೆ ಅಗತ್ಯವಿರುವ 44 ಏವಿಯಾನಿಕ್ಸ್ ಮತ್ತು ಇಂಟರ್ಫೇಸ್ ಮಾಡ್ಯೂಲ್‍ಗಳನ್ನು ಕೆಲ್ಟ್ರಾನ್ ಉತ್ಪಾದಿಸಿದೆ. ತಿರುವನಂತಪುರಂ ಮಾನ್ವಿಲಾದಲ್ಲಿರುವ ಕೆಲ್ಟ್ರಾನ್ ಕಮ್ಯುನಿಕೇಷನ್ ಕಾಂಪ್ಲೆಕ್ಸ್ ಮತ್ತು ಕರಕುಳಂನಲ್ಲಿರುವ ಕೆಲ್ಟ್ರಾನ್ ಸಲಕರಣೆ ಸಂಕೀರ್ಣಗಳು ಗಗನ್ಯಾನ್ ಯೋಜನೆಯ ಭಾಗವಾಗಿದೆ.
ಇಸ್ರೋದ ಗುಣಮಟ್ಟ ನಿಯಂತ್ರಣ ಮಾನದಂಡಗಳ ಮೂಲಕ ಜೋಡಣೆ ಮತ್ತು ತಯಾರಿಕೆಯ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಕೆಲ್ಟ್ರಾನ್ ಗಗನ್ಯಾನ್ ಮಿಷನ್ ನ ಭಾಗವಾಯಿತು. ಕೆಲ್ಟ್ರಾನ್ ಪ್ರಮುಖ ಸಂಸ್ಥೆಗಳಾದ ವಿ.ಎಸ್.ಎಸ್.ಸಿ, ಎಲ್.ಪಿ.ಎಸ್.ಸಿ, ಈ.ಐ ಎಸ್ ಯು, ಯು.ಆರ್.ಎಸ್.ಸಿ ಬೆಂಗಳೂರು, ಇಸ್ರೋ ಕೇಂದ್ರಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಕೆಲ್ಟ್ರಾನ್ ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಮಿಷನ್‍ಗಳಲ್ಲಿಯೂ ಭಾಗಿಯಾಗಿತ್ತು. ಕೆಲ್ಟ್ರಾನ್ ಚಂದ್ರಯಾನ-3 ಕ್ಕಾಗಿ 41 ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‍ಗಳನ್ನು ಮತ್ತು ಆದಿತ್ಯ ಎಲ್-1 ಗಾಗಿ 38 ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‍ಗಳನ್ನು ತಯಾರಿಸಿದೆ.