ತಿರುವನಂತಪುರಂ: ವಿಧಾನಸಭೆ ಗದ್ದಲ ಪ್ರಕರಣದಲ್ಲಿ ಸಚಿವ ವಿ.ಶಿವನ್‍ಕುಟ್ಟಿ, ಎಲ್‍ಡಿಎಫ್ ಸಂಚಾಲಕ ಇಪಿ ಜಯರಾಜನ್, ಕೆಟಿ ಜಲೀಲ್ ಸೇರಿದಂತೆ ಏಳು ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ವಿಚಾರಣೆಯ ಭಾಗವಾಗಿ ಆರೋಪಿಗಳನ್ನು ತಿರುವನಂತಪುರಂ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಲಯಕ್ಕೆ ಹಾಜರಾದ ಬಳಿಕ ಇ.ಪಿ.ಜಯರಾಜನ್ ಪ್ರತಿಕ್ರಿಯಿಸಿ, ಏಕಪಕ್ಷೀಯವಾಗಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುಡಿಎಫ್ ಶಾಸಕರು ವಿಧಾನಸಭೆಯಲ್ಲಿ ಹಿಂಸಾಚಾರ ನಡೆಸಿದರು. ಮಹಿಳಾ ಶಾಸಕರ ಮೇಲೆ ಹಲ್ಲೆ ನಡೆದಾಗ ಸುಮ್ಮನೆ ನಿಲ್ಲಲು ಸಾಧ್ಯವಾಗಲ್ಲ. ಹಾಗೆಂದು ಯಾರಾದರೂ ಭಾವಿಸಿದ್ದೀರಾ ಎಂದೂ ಜಯರಾಜನ್ ಪ್ರಶ್ನಿಸಿದ್ದಾರೆ.
ಮಹಿಳೆಯರ ಮೇಲೂ ಹಲ್ಲೆ ನಡೆದಿದೆ. ಅದನ್ನು ಸಂಪೂರ್ಣವಾಗಿ ನಿರಾಕರಿಸಿ ಉಮ್ಮನ್ ಚಾಂಡಿ ಸರ್ಕಾರ ಏಕಪಕ್ಷೀಯವಾಗಿ ಪ್ರಕರಣ ದಾಖಲಿಸಿತು. ತಾವು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದಾಗಿ ಇ.ಪಿ.ಜಯರಾಜನ್ ಹೇಳಿದ್ದಾರೆ. ಪ್ರಕರಣದ ವಿಚಾರಣೆ ದಿನಾಂಕವನ್ನು ಡಿಸೆಂಬರ್ 1 ರಂದು ನಿರ್ಧರಿಸಲಾಗುವುದು. ಪೆÇಲೀಸ್ ತನಿಖಾ ವರದಿಯಲ್ಲಿನ ಕೆಲವು ದಾಖಲೆಗಳು ಬಂದಿಲ್ಲ ಎಂದು ಪ್ರತಿವಾದಿಯು ಸೂಚಿಸಿದರು. ಈ ದಾಖಲೆಗಳನ್ನು ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣದ ವಿಚಾರಣೆಯನ್ನು ತಪ್ಪಿಸಲು ಆರೋಪಿಗಳು ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿದ್ದರು ಆದರೆ ಯಶಸ್ವಿಯಾಗಲಿಲ್ಲ. ಮ್ಯೂಸಿಯಂ ಪೋಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಪರಾಧ ವಿಭಾಗದ ಡಿವೈಎಸ್‍ಪಿ ತನಿಖೆ ಮುಂದುವರೆಸಿದ್ದಾರೆ, ಆದರೆ ಹೊಸ ಸಾಕ್ಷ್ಯಾಧಾರಗಳು ಪತ್ತೆಯಾಗದಿದ್ದಲ್ಲಿ, ಹಳೆಯ ಚಾರ್ಜ್‍ಶೀಟ್‍ನ ಆಧಾರದ ಮೇಲೆ ವಿಚಾರಣೆ ನಡೆಯಲಿದೆ.