HEALTH TIPS

ಧರ್ಮತ್ತಡ್ಕದಲ್ಲಿ ವಿವಿಧ ಸಮಿತಿಗಳ ಸಮಾಲೋಚನಾ ಸಭೆ

                   ಕುಂಬಳೆ: ನವಂಬರ್ 7ರಿಂದ 10ರ ವರೆಗೆ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ 62 ನೇ ಕೇರಳ ರಾಜ್ಯ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ  ರೂಪುಗೊಂಡ ವಿವಿಧ ಸಮಿತಿಗಳ ಸಮಾಲೋಚನಾ ಸಭೆ ಮಂಗಳವಾರ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಸಭಾಧ್ಯಕ್ಷತೆಯನ್ನು ವಹಿಸಿ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಿದರು. ಕಲೋತ್ಸವದಾದ್ಯಂತ ತಾನು ಜೊತೆಗಿರುವುದಾಗಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಸಂಘಟನಾ ಸಮಿತಿಗಳ ಪ್ರಗತಿಯ ದಾಖಲೀಕರಣದ ಮಹತ್ವವನ್ನು ತಿಳಿಸಿದರು.  

                  ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಸಭೆಯನ್ನು ಉದ್ದೇಶಿಸಿ ಮಾತನಾಡಿ, ದೇಶ ವಿದೇಶಗಳಲ್ಲಿ ಉತ್ತಮ ನೆಲೆಯಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಬೇಕೆಂದು ಕೋರಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಮಾತನಾಡಿ ಸರ್ವರೂ ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಿದರು.

                 ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ, ಊಟೋಪಚಾರ ಸಮಿತಿಯ ಅಧ್ಯಕ್ಷ ರಾಜಕುಮಾರ್ ಕೆ, ಸ್ವಾಗತ ಸಮಿತಿ ಅಧ್ಯಕ್ಷೆ ಉಷಾ ಕೆ.ಆರ್, ಆರ್ಥಿಕ ಸಮಿತಿ ಅಧ್ಯಕ್ಷ  ರಾಮಮೋಹನ್ ಸಿ.ಯಚ್, ವೇದಿಕೆ, ಧ್ವನಿ, ಬೆಳಕು ಸಮಿತಿ ಅಧ್ಯಕ್ಷ ಪ್ರಶಾಂತ ಹೊಳ್ಳ, ಸಾಮರಸ್ಯ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣನ್, ಬಹುಮಾನ ಫಲಕ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಸಿ, ಪ್ರಚಾರ ಸಮಿತಿ ಅಧ್ಯಕ್ಷ ಪ್ರದೀಪ್ ಕೆ ಹಾಗೂ ಆರೋಗ್ಯ-ನೈರ್ಮಲ್ಯ ಸಮಿತಿ ಅಧ್ಯಕ್ಷ ರಾಮಕೃಷ್ಣ ಭಟ್ ಕಲೋತ್ಸವದ ಯಶಸ್ಸಿಗಾಗಿ ರಚಿಸಿದ ಎಲ್ಲಾ 9 ಉಪಸಮಿತಿಗಳ ಅಧ್ಯಕ್ಷರುಗಳು ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು. ಸಮಿತಿಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವುದಕ್ಕಾಗಿ ಸಭಿಕರ ಅಭಿಪ್ರಾಯಗಳನ್ನೂ ಶೇಖರಿಸಲಾಯಿತು. ಎಚ್.ಎಂ ಪೋರಂ ಕಾರ್ಯದರ್ಶಿ ಶಾಮ ಭಟ್, ಸಹ ಕಾರ್ಯದರ್ಶಿ ಸತ್ಯಪ್ರಕಾಶ್, ಸ್ಥಳೀಯ ವೈದ್ಯಾಧಿಕಾರಿ ಡಾ.ಸೀತಾರತ್ನ, ಹೈಸ್ಕೂಲ್ ಹಾಗೂ ಮಾಧ್ಯಮಿಕ ಶಾಲೆಗಳ ಪಿ.ಟಿ.ಎ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮತ್ತು ಅಶೋಕ, ಮಾತೃ ಸಮಿತಿ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ವಾರ್ಡ್ ಸದಸ್ಯರಾದ ಅಶೋಕ ಭಂಡಾರಿ, ಶಾಂತಿ ವೈ, ಗಂಗಾಧರ್, ಪಾಲಾಕ್ಷ, ಯು.ಪಿ ಶಾಲಾ ವ್ಯವಸ್ಥಾಪಕಿ ವಿಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. 

            ಯು.ಪಿ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಪ್ರಾರ್ಥಿಸಿದರು. ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್ ವಂದಿಸಿದರು. ಶ್ರೀನಿವಾಸ್ ಕೆ.ಎಚ್ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries