HEALTH TIPS

ಬಳಕೆದಾರನಿಂದ ಹೆಚ್ಚು ವರಮಾನ: ದೂರಸಂಪರ್ಕ ಕಂಪನಿಗಳ ನಿರೀಕ್ಷೆ

                 ವದೆಹಲಿ: ದೂರಸಂಪರ್ಕ ಕಂಪನಿಗಳು 5ಜಿ ಜಾಲಕ್ಕಾಗಿ ಮಾಡಿರುವ ಹೂಡಿಕೆಯನ್ನು ಮರಳಿ ಪಡೆಯಬೇಕಾದರೆ ಪ್ರತಿ ಬಳಕೆದಾರನಿಂದ ವರ್ಷಕ್ಕೆ ₹270ರಿಂದ ₹300 ವರಮಾನ ಬರಬೇಕು ಎಂಬುದು ಈ ಕ್ಷೇತ್ರದ ಪರಿಣತರ ಅಭಿಪ್ರಾಯವಾಗಿದೆ. ಆದರೆ, ಈಗ ಈ ಕ್ಷೇತ್ರವು ಪ್ರತಿ ಬಳಕೆದಾರನಿಂದ ಪಡೆಯುತ್ತಿರುವ ವರಮಾನವು ₹140ರಿಂದ ₹200 ಮಾತ್ರ.

                ಜಾಗತಿಕ ಸರಾಸರಿಯು ₹600ರಿಂದ ₹850ರಷ್ಟಿದೆ. ಚೀನಾದ ಕಂಪನಿಗಳು ಪ್ರತಿ ಬಳಕೆದಾರನಿಂದ ವರ್ಷಕ್ಕೆ ₹580 ವರಮಾನ ಪಡೆಯುತ್ತಿವೆ.

               ಅತಿ ಹೆಚ್ಚು ಬಳಕೆಯಾಗುವ 4-5 ಆಯಪ್‌ಗಳು ವರಮಾನ ಹಂಚಿಕೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆಯನ್ನು ದೂರಸಂಪರ್ಕ ಸೇವಾ ಕಂಪನಿಗಳು ಇರಿಸಿವೆ. ಹೀಗಾದರೆ, 5ಜಿ ಜಾಲಕ್ಕೆ ಮಾಡಿರುವ ವೆಚ್ಚದ ಒಂದು ಭಾಗವನ್ನು ‍ಪಡೆದುಕೊಳ್ಳಬಹುದು ಎಂಬುದು ಈ ಕಂಪನಿಗಳ ಪ್ರತಿಪಾದನೆಯಾಗಿದೆ.

              ಆದರೆ, ಭಾರತದ ದೂರಸಂಪರ್ಕ ಸೇವೆಯು ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ವೆಚ್ಚದ್ದಾಗಿರಬೇಕು ಎಂದು ಸರ್ಕಾರ ಬಯಸುತ್ತಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

              'ಸರ್ಕಾರದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಭಾರತದಲ್ಲಿ ದೂರಸಂಪರ್ಕ ಸೇವೆಯು ಬಹಳ ಕಡಿಮೆ ವೆಚ್ಚದ್ದಾಗಿರಬೇಕು. ಈಗಲೂ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ದೂರಸಂಪರ್ಕ ಸೇವೆಯು ಮಿತವ್ಯಯಕರವೇ ಆಗಿದೆ' ಎಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌-2023ರಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವೈಷ್ಣವ್‌ ಹೇಳಿದ್ದಾರೆ.

        ದೇಶದಲ್ಲಿ 5ಜಿ ಸೇವೆಗೆ ಕಳೆದ ವರ್ಷವೇ ಚಾಲನೆ ನೀಡಿದ್ದರೂ ಅದರಿಂದ ವರಮಾನ ಬರಲು ಆರಂಭವಾಗಿಲ್ಲ ಎಂದು ಭಾರತದ ಸೆಲ್ಯುಲಾರ್‌ ನಿರ್ವಾಹಕರ ಸಂಘವು ಹೇಳಿದೆ.

                6ಜಿ ತಂತ್ರಜ್ಞಾನ ಅಭಿವೃದ್ಧಿ ಕುರಿತು ಕೆಲಸ ಈಗಾಗಲೇ ಆರಂಭವಾಗಿದೆ. 'ಭಾರತ್‌ 6ಜಿ ವಿಷನ್‌'ಗೆ ಅಂತರರಾಷ್ಟ್ರೀಯ ದೂರಸಂಪರ್ಕ ಸಂಘಟನೆಯು ಅನುಮೋದನೆ ನೀಡಿದೆ ಎಂದು ವೈಷ್ಣವ್‌ ತಿಳಿಸಿದ್ದಾರೆ.

               6ಜಿ ಅಭಿವೃದ್ಧಿಯಲ್ಲಿ ಉದ್ಯಮ, ಶೈಕ್ಷಣಿಕ ವಲಯ, ವಿದ್ಯಾರ್ಥಿಗಳು ಮತ್ತು ಸರ್ಕಾರದ ಸಹಭಾಗಿತ್ವ ಇರಲಿದೆ ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries