ಕಾಸರಗೋಡು: ಜಿಲ್ಲಾಡಳಿತದ ನೇತೃತ್ವದಲ್ಲಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ವಾರ್ತಾ ಕಛೇರಿಯ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮಲಯಾಳ ದಿನಾಚರಣೆ ಹಾಗೂ ಆಡಳಿತ ಭಾಷಾ ಸಪ್ತಾಹವನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನ.1 ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ.
ಈ ಸಂದರ್ಭ ಜಾನಪದ ಕಲಾ ಸಂಪ್ರದಾಯ ಮತ್ತು ತುಳು ಭಾಷೆಗೆ ಗಣನೀಯ ಕೊಡುಗೆ ನೀಡಿದ ಶಂಕರ ಸ್ವಾಮಿ ಕೃಪಾ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರ ಮತ್ತು ಬರಹಗಾರ ಕೆ.ಎ.ಗಫೂರ್ ಅವರನ್ನು ಸನ್ಮಾನಿಸಲಾಗುವುದು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸುವರು. ಖ್ಯಾತ ಸಾಂಸ್ಕøತಿಕ ಕಾರ್ಯಕರ್ತ ಜಿ.ಬಿ.ವ್ಯಾಟ್ಸನ್ ಅವರು ಕೆ.ಎ.ಗಫೂರ್ ಮತ್ತು ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅವರು ಶಂಕರ ಸ್ವಾಮಿಕೃಪಾ ಅವರ ಪರಿಚಯ ಭಾಷಣ ಮಾಡುವರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ. ನವೀನ್ ಬಾಬು ಅವರು ಪ್ರತಿಜ್ಞಾವಿಧಿ ಬೋಧಿಸುವರು. ಈ ಸಂದರ್ಭ ಜಿಲ್ಲಾ ಮಾಹಿತಿ ಕಛೇರಿ ಆಯೋಜಿಸಿದ್ದ ಗಾಂಧಿ ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.