HEALTH TIPS

ಪೆನ್ ಡ್ರೈವ್ ಇನ್ನು ದುರುಪಯೋಗಪಡಿಸಲಾಗದು!; ಫಿಂಗರ್ ಪ್ರಿಂಟ್ ಭದ್ರತಾ ವೈಶಿಷ್ಟ್ಯ ಪರಿಚಯಿಸಿದ ಲೆಕ್ಸರ್

                 ಪೆನ್ ಡ್ರೈವ್‍ಗೆ ಡೇಟಾ ವರ್ಗಾವಣೆ ಮಾಡುವಾಗ ನಮ್ಮ ಎಲ್ಲ ಡೇಟಾ ಬೇರೆ ಯಾರಿಗಾದರೂ ಸಿಕ್ಕಿಬಿಟ್ಟರೆ ಎಂಬುದು ಎಲ್ಲರ ಚಿಂತೆ.

                   ಗೌಪ್ಯತೆಯನ್ನು ರಕ್ಷಿಸಲು ಲೆಕ್ಸರ್ ಹೊಸ ವೈಶಿಷ್ಟ್ಯ ಪರಿಚಯಿಸಿದೆ. ಲೆಕ್ಸರ್ ಟ್ಯಾಂಪರಿಂಗ್ ತಡೆಗಟ್ಟಲು ಫಿಂಗರ್‍ಪ್ರಿಂಟ್ ಭದ್ರತಾ ವೈಶಿಷ್ಟ್ಯದೊಂದಿಗೆ ಪೆನ್ ಡ್ರೈವ್ ಅನ್ನು ಪರಿಚಯಿಸಿದೆ. ಜಂಪ್ ಡ್ರೈವ್ ಎಫ್.35 ಹೆಸರಿನಲ್ಲಿ ಪೆನ್ ಡ್ರೈವ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 300 ಎಂ.ಬಿ./ಎಸ್s ಓದುವ ವೇಗದೊಂದಿಗೆÀ ಯು.ಎಸ್.ಬಿ. 3.0 ಡ್ರೈವ್ ಆಗಿದೆ.

                    ಕೆಲಸ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಪೆನ್ ಡ್ರೈವ್‍ನಲ್ಲಿ ಡೇಟಾವನ್ನು ಸಂಗ್ರಹಿಸುವ ಅವಶ್ಯಕತೆಯಿದೆ. ಇದು ಕೆಲವೊಮ್ಮೆ ವೀಡಿಯೊ, ಪೋಟೋ ಅಥವಾ ಡಾಕ್ಯುಮೆಂಟ್‍ನಂತಹ ಯಾವುದಾದರೂ ರೂಪದಲ್ಲಿರಬಹುದು. ಸುಲಭ ವರ್ಗಾವಣೆ ಮತ್ತು ಸಂಗ್ರಹಣೆಗಾಗಿ ಅನೇಕ ಜನರು ಪೆನ್ ಡ್ರೈವ್‍ಗಳನ್ನು ಬಳಸುತ್ತಾರೆ. ಇದರ ಜನಪ್ರಿಯತೆಗೆ ಮುಖ್ಯ ಕಾರಣವೆಂದರೆ ಅದನ್ನು ಕೈಯಲ್ಲಿ ಅನುಕೂಲಕರವಾಗಿ ಇಟ್ಟುಕೊಳ್ಳಬಹುದಾಗಿದೆ. 

                      ಆದರೆ ಪೆನ್ ಡ್ರೈವ್‍ನಲ್ಲಿ ಉಳಿಸಿದ ಡೇಟಾವನ್ನು ಭದ್ರಪಡಿಸುವುದು ತುಂಬಾ ಸವಾಲಿನ ಕೆಲಸ. ಬಳಕೆದಾರರ ಕೈಯಿಂದ ಪೆನ್ ಡ್ರೈವ್ ಕಳೆದು ಹೋದರೆ, ಅದನ್ನು ಯಾರೂ ದುರುಪಯೋಗಪಡಿಸುವ ಸಾಧ್ಯತೆ ಹೆಚ್ಚು. ಕಾರಣ ಅವರು ಸುಲಭವಾಗಿ ನೇರವಾಗಿ ಪ್ರವೇಶಿಸಬಹುದು. ಫಿಂಗರ್‍ಪ್ರಿಂಟ್‍ನ ಪರಿಚಯದೊಂದಿಗೆ, ಇದಕ್ಕೆ ತಡೆ ಬೀಳಲಿದೆ. 

                     ಪಿಂಗರ್ ಪ್ರಿಂಟ್ ಭದ್ರತಾ ವ್ಯವಸ್ಥೆಯೊಂದಿಗೆ ಬರುವ ಲೆಕ್ಸಾರ್‍ನ ಪೆನ್ ಡ್ರೈವ್‍ನಲ್ಲಿ ಡೇಟಾವನ್ನು ಸಂಗ್ರಹಿಸಬಹುದು. ಡೇಟಾವನ್ನು ಸುರಕ್ಷಿತಗೊಳಿಸಲು 256 ಎಇಎಸ್ ಎನ್‍ಕ್ರಿಪ್ಶನ್ ಮಾನದಂಡವನ್ನು ಬಳಸಲಾಗುತ್ತದೆ. ಇದು 10 ಫಿಂಗರ್ ಪ್ರಿಂಟ್‍ಗಳನ್ನು ಒಳಗೊಂಡಿರುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries