ನವದೆಹಲಿ: ಇಸ್ರೇಲ್- ಪ್ಯಾಲೆಸ್ಟೀನ್ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ)ತಮ್ಮ ಸಹವರ್ತಿ ಶೇಖ್ ಅಬ್ದುಲ್ಲಾ ಬಿನ್ ಜಯೇದ್ ನಹ್ಯಾನ್ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.