ಜೈಪುರ: ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ನರಿಗಾಗಿ ರಾಜಸ್ಥಾನದ ಅಜ್ಮೀರ್ ದರ್ಗಾದ ಉಸ್ತುವಾರಿಗಳು ಶುಕ್ರವಾರ ಪ್ರಾರ್ಥನಾ ಸಭೆ ನಡೆಸಿದರು.
ಜೈಪುರ: ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ನರಿಗಾಗಿ ರಾಜಸ್ಥಾನದ ಅಜ್ಮೀರ್ ದರ್ಗಾದ ಉಸ್ತುವಾರಿಗಳು ಶುಕ್ರವಾರ ಪ್ರಾರ್ಥನಾ ಸಭೆ ನಡೆಸಿದರು.
'ಪ್ಯಾಲೆಸ್ಟೀನ್‌ನಲ್ಲಿ ರಕ್ತಪಾತವನ್ನು ನಿಲ್ಲಿಸಿ' ಎನ್ನುವ ಕಾರ್ಯಕ್ರಮ ದರ್ಗಾದದಲ್ಲಿ ನಡೆಸಲಾಯಿತು ಎಂದು ಅಂಜುಮನ್ ಸೈಯದ್ ಝದ್ಗನ್‌ನ ಕಾರ್ಯದರ್ಶಿ ಸರ್ವರ್ ಚಿಶ್ತಿ ತಿಳಿಸಿದ್ದಾರೆ.
'ಪ್ಯಾಲೇಸ್ಟೀನ್ ಪ್ಯಾಲೆಸ್ಟೀನಿಯನ್ನರಿಗೆ ಸೇರಿದ್ದು ಎಂದು ಒಮ್ಮೆ ಮಹಾತ್ಮ ಗಾಂಧಿ ಹೇಳಿದ್ದರು. ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಮಾಜಿ ಪ್ರಧಾನಿಗಳ ನಿಲುವು ಇದೇ ಆಗಿತ್ತು. ಪ್ಯಾಲೆಸ್ಟೀನ್ ಅರಬರಿಗೆ ಸೇರಿದ್ದು ಎಂದು ಅವರು ಹೇಳಿದ್ದರು. ನಮ್ಮದೂ ಅದೇ ತತ್ವ ಎಂದು ಚಿಶ್ತಿಯವರು ಹೇಳಿದ್ದಾರೆ. ಅಲ್ಲದೆ ಶಾಂತಿಯಿಂದ ಬದುಕಲು ಪ್ಯಾಲೆಸ್ಟೀಯನ್ನರಿಗೆ ಅವಕಾಶ ನೀಡಬೇಕು ಎಂದು ಅವರು ನುಡಿದಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧವನ್ನು ವಿಶ್ವಸಂಸ್ಥೆ ಹಾಗೂ ಭಾರತ ಸರ್ಕಾರ ಮಧ್ಯಸ್ಥಿಕೆ ವಹಿಸಿ ನಿಲ್ಲಿಸಬೇಕು ಎಂದು ಅಜ್ಮೀರ್ ದರ್ಗಾದ ಮುಖ್ಯಸ್ಥ ಝೈನುಲ್ ಆಬಿದೀನ್ ಅಲಿ ಖಾನ್ ಗುರುವಾರ ಪ್ರಕಟಣೆಯಲ್ಲಿ ಕೋರಿದ್ದರು.