ಕಾಸರಗೋಡು: ನವರಾತ್ರಿ ಮಹೋತ್ಸವದ ವಿಜಯದಶಮಿ ಅಂಗವಾಗಿ ಜಿಲ್ಲೆಯ ನಾನಾ ಶಕ್ತಿಕೇಂದ್ರಗಳಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆಸಲಾಯಿತು. ಎಳೆಯ ಮಕ್ಕಳಿಗೆ ಜ್ಞಾನದ ಮೊಲ ಅಕ್ಷರ ಕಲಿಸಿಕೊಡಲಾಯಿತು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ಮಹಾದೇವಿ ದೇವಸ್ಥಾನ, ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೊರಕ್ಕೋಡು ಶ್ರೀ ದುರ್ಗಾಪರಮಂಏಶ್ವರೀ ಸುಬ್ರಹ್ಮಣ್ಯ ದೇವಸ್ಥಾನ, ತೆಕ್ಕಿಲ್ ಮಹಾಲಕ್ಷಮೀಪುರಂ ಶ್ರೀ ಮಹಿಷಮರ್ದಿನೀ ದಏವಸ್ಥಾನದ, ಕನಕವಳಪ್ಪು ಶ್ರೀ ಧರ್ಮಶಾಸ್ತಾ ದೇವಸ್ಥಾನ, ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಯಿತು.
ಚಿತ್ರ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಅಕ್ಷರಾಭ್ಯಾಸ ನಡೆಸಲಾಯಿತು.