ಕಾಸರಗೋಡು: ಜಿಲ್ಲೆಯಲ್ಲಿ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬೇಕಲ ಠಾಣೆ ಜಿಲ್ಲೆಯ ಅತ್ಯುತ್ತಮ ಪೆÇಲೀಸ್ ಠಾಣೆಯಾಗಿ ಆಯ್ಕೆಯಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರಕ್ಕೂ ಹೆಚ್ಚು ಮಂದಿ ಮಹಿಳೆಯರ ಕತ್ತಿನಿಂದ ಸರ ಕಳ್ಳತನ ನಡಿಸಿದ ಆರೋಪಿಗಳಿಬ್ಬರನ್ನು ಬಂಧಿಸುವ ಮೂಲಕ ಬೇಕಲ ಅತ್ಯುತ್ತಮ ಠಾಣೆ ಎಂಬ ಖ್ಯಾತಿಗೆ ಕಾರಣವಾಗಿದೆ. ಈ ಆರೋಪಿಗಳನ್ನು ಬಂಧಿಸುವಲ್ಲಿ ಮುಂದಾಳತ್ವ ವಹಿಸಿದ್ದ ಬೇಕಲ ಡಿವೈಎಸ್ಪಿ ಸುನೀಲ್ ಕುಮಾರ್ ಉತ್ತಮ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಕಾಸರಗೋಡು ಠಾಣೆಯ ಸಿವಿಲ್ ಪೆÇಲೀಸ್ ಅಧಿಕಾರಿ ಗುರುರಾಜ್ ಅವರು ಅತ್ಯುತ್ತಮ ಸಾಧಕರಾಗಿ ಆಯ್ಕೆಯಾಗಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು ತಲೆಮರೆಸಿಕೊಂಡಿದ್ದ 50ಕ್ಕೂ ಹೆಚ್ಚು ಎಲ್ ಪಿ ವಾರಂಟ್ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದು ಇವರ ಸಾಧನೆಗೆ ಕಾರಣವಾಗಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ, ಹೆಚ್ಚುವರಿ ಎಸ್ಪಿ ವಿ.ಶ್ಯಾಮ್ ಕುಮಾರ್ ಮತ್ತು ಜಿಲ್ಲೆಯ ಡಿವೈಎಸ್ಪಿಗಳನ್ನೊಳಗೊಂಡ ಸಮಿತಿಯು ಈ ಆಯ್ಕೆ ನಡೆಸಿದೆ.