ಕಾಸರಗೋಡು: ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳಲ್ಲಿ ಅಕ್ಟೋಬರ್ 19 ರಿಂದ 21 ರವರೆಗೆ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ಖಾತೆ ಚಾಲ್ತಿ ಮೇಳವನ್ನು ಆಯೋಜಿಸಲಾಗುತ್ತಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಐಪಿಪಿಬಿ ಖಾತೆಗಳನ್ನು ಸಕ್ರಿಯಗೊಳಿಸಿ ಆಯಾ ಅಂಚೆ ಕಚೇರಿಗಳಲ್ಲಿ ಸೌಲಭ್ಯ ಮುಂದುವರಿಯುವಂತೆ ಮಾಡಲಾಗುವುದು. ಅದೇ ರೀತಿ, ತಮ್ಮ ಖಾತೆಗೆ ನಾಮಿನಿಯನ್ನು ಸೇರಿಸದ ಗ್ರಾಹಕರು ಈ ದಿನಗಲಲ್ಲಿ ಅಂಚೆ ಕಚೇರಿಗೆ ಬಂದು ನಾಮಿನಿಯನ್ನು ಸೇರಿಸಬಹುದಾಗಿದೆ.
ರೂ 10 ಲಕ್ಷ ಅಪಘಾತ ವಿಮಾ ಪಾಲಿಸಿ 399 ವಾರ್ಷಿಕ ಪ್ರೀಮಿಯಂ ಪಾವತಿ ಸೌಲಭ್ಯ ಈ ದಿನಗಳಲ್ಲಿ ಎಲ್ಲಾ ಪೆÇೀಸ್ಟ್‍ಕಚೇರಿಗಳಲ್ಲೂ ಲಭ್ಯವಿರಲಿದೆ. ಈ ದಿನಗಳಲ್ಲಿ ಸಣ್ಣ ವ್ಯಾಪಾರಿಗಳಿಗೆ ಕ್ಯೂಆರ್ ಸ್ಟಿಕ್ಕರ್‍ಗಳ ವಿತರಣೆಯೂ ನಡೆಯಲಿದೆ.
ಅಲ್ಲದೆ, ವೈಯಕ್ತಿಕ ಸಾಲ, ವಾಹನ ಸಾಲ, ಗೃಹ ಸಾಲ ಮತ್ತು ವ್ಯಾಪಾರ ಸಾಲಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರು ಅಂಚೆ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.