ನವದೆಹಲಿ; ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯಲ್ಲಿ ಮೆಕ್ಸಿಕನ್ ಸೆನೆಟ್ ಅಧ್ಯಕ್ಷೆ ಅನಾ ಲಿಲಿಯಾ ರಿವೆರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ರಾಕಿ ಕಟ್ಟಿದ್ದಾರೆ.
ನವದೆಹಲಿ; ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯಲ್ಲಿ ಮೆಕ್ಸಿಕನ್ ಸೆನೆಟ್ ಅಧ್ಯಕ್ಷೆ ಅನಾ ಲಿಲಿಯಾ ರಿವೆರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ರಾಕಿ ಕಟ್ಟಿದ್ದಾರೆ.
ಈ ವೇಳೆ ಅನಾ ಅವರ ತಲೆಯ ಮೇಲೆ ಕೈ ಇಟ್ಟು ಪ್ರಧಾನಿ ಮೋದಿ ಆಶೀರ್ವಾದ ಮಾಡಿದ್ದಾರೆ. ಇದರ ವಿಡಿಯೊವನ್ನು ಎಎನ್‌ಐ ಸಂಸ್ಥೆ ಹಂಚಿಕೊಂಡಿದೆ.
ದೆಹಲಿಯ ಯಶೋಭೂಮಿಯಲ್ಲಿ ಹೊಸದಾಗಿ ನಿರ್ಮಿಸಲಾದ ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಮತ್ತು ಎಕ್ಸ್‌ಪೋ ಸೆಂಟರ್ (IICC)ನಲ್ಲಿ 9ನೇ ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ (ಪಿ20) ನಡೆಯುತ್ತಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೋದಿ, 'ಭಯೋತ್ಪಾದನೆ ಜಗತ್ತಿನಲ್ಲಿ ಎಲ್ಲಿಯಾದರೂ, ಯಾವುದೇ ರೂಪದಲ್ಲಿದ್ದರೂ ಅದು ಮಾನವೀಯತೆಗೆ ವಿರುದ್ಧವಾಗಿದೆ. ಸಂಘರ್ಷಗಳು ಯಾರಿಗೂ ಪ್ರಯೋಜನವಾಗುವುದಿಲ್ಲ' ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಜಿ20 ದೇಶಗಳಲ್ಲದೆ, ಇತರ 10 ರಾಷ್ಟ್ರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, 25 ಮಂದಿ ಸ್ಪೀಕರ್‌ಗಳು, 10 ಮಂದಿ ಉಪ ಸಭಾಪತಿಗಳು ಹಾಗೂ 50 ಮಂದಿ ಸಂಸತ್ತಿನ ಸದಸ್ಯರು ಭಾಗವಹಿಸಿದ್ದವು. ಪ್ಯಾನ್ ಆಫ್ರಿಕನ್ ಸಂಸತ್ತಿನ ಅಧ್ಯಕ್ಷರು ಭಾರತದಲ್ಲಿ ಮೊದಲ ಬಾರಿಗೆ ಪಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಈ ಸಭೆಯು ಮುಖ್ಯವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪರಿವರ್ತನೆ, ಮಹಿಳಾ ಸಾರಥ್ಯದ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ, ಸುಸ್ಥಿರ ಶಕ್ತಿ ಪರಿವರ್ತನೆ ಎನ್ನುವ ನಾಲ್ಕು ಅಂಶಗಳ ಮೇಲೆ ಕೇಂದ್ರೀಕೃತವಾಗಿತ್ತು.