ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆಧಾರ್ ಆಧಾರಿತ ವಹಿವಾಟು ವ್ಯವಸ್ಥೆ AEPS ಮೂಲಕ ಸುರಕ್ಷಿತ ವಹಿವಾಟಿಗಾಗಿ OTP ದೃಢೀಕರಣ ಮತ್ತು SMS ಪರಿಶೀಲನೆಯನ್ನು ಪರಿಚಯಿಸಲಾಗಿದೆ.
ಆದರೆ ವಂಚಕರು ಫಿಂಗರ್ ಪ್ರಿಂಟ್ ಡೇಟಾ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರಿನಂತಹ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಆದರೆ ಆಧಾರ್ ಸಂಖ್ಯೆಯನ್ನು ಲಾಕ್ ಮಾಡುವ ಮೂಲಕ ನೀವು ಈ ಪರಿಸ್ಥಿತಿಯಿಂದ ಮುಕ್ತರಾಗಬಹುದು.
ಇತ್ತೀಚೆಗೆ ನ್ಯಾxನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ AEPS ವ್ಯವಸ್ಥೆಯನ್ನು ಪರಿಚಯಿಸಿತು. ಹೊಸ ವ್ಯವಸ್ಥೆಯು ಆಧಾರ್ ಕಾರ್ಡ್ ಹೊಂದಿರುವವರಿಗೆ ಬ್ಯಾಂಕ್ ಸೇವೆಗಳನ್ನು ಪಡೆಯಲು ಸುಲಭವಾಗುತ್ತದೆ. BHIM ಆಧಾರ್ ಮೂಲಕ ವಹಿವಾಟು ನಡೆಸಬಹುದು. ಮೈಕ್ರೋ ಎಟಿಎಂ ವಹಿವಾಟುಗಳನ್ನು ವೇಗಗೊಳಿಸಲು ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ನೀವು ದಿನಕ್ಕೆ 50,000 ರೂ.ಹಿಂಪಡೆಯಲು (ವಿತ್ ಡ್ರಾ)ಅವಕಾಶವಿದೆ.
ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದು ಹೇಗೆ?:
ಮೊದಲ ಬಾರಿಗೆ 'MAadhaar' ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸೈನ್ ಅಪ್ ಮಾಡಿ. ಆಧಾರ್ ಕಾರ್ಡ್‍ನೊಂದಿಗೆ ಲಿಂಕ್ ಮಾಡಲಾದ ಪೋನ್ ಸಂಖ್ಯೆಯನ್ನು ನಮೂದಿಸಬೇಕು ಎಂಬುದನ್ನು ದಯವಿಟ್ಟು ಗಮನಿಸಿ. ನಂತರ ಆಧಾರ್ ಕಾರ್ಡ್ ವಿವರಗಳನ್ನು ಪರಿಶೀಲಿಸಿ. 'ಲಾಕ್ ಯುವರ್ ಬಯೋಮೆಟ್ರಿಕ್ಸ್' ಆಯ್ಕೆಯನ್ನು ಆರಿಸಿ. ಇದೇ ರೀತಿ ಆಧಾರ್ ಸಂಖ್ಯೆಯನ್ನು ಕೂಡ ಲಾಕ್ ಮಾಡಬಹುದು. ಬಯೋಮೆಟ್ರಿಕ್ಸ್ ಅನ್ನು UIDAI ವೆಬ್‍ಸೈಟ್ ಮೂಲಕವೂ ಲಾಕ್ ಮಾಡಬಹುದು.